ಮಗುವನ್ನು ದತ್ತು ತೆಗೆದುಕೊಳ್ಳಲು ದಂಪತಿಯ ಮದುವೆ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಕೆಲವು ರಾಜ್ಯಗಳಲ್ಲಿ ಈ ನಿಯಮ ಜಾರಿಯಲ್ಲಿದ್ದು, ಮಕ್ಕಳ ದುರ್ಬಳಕೆ ಆಗಬಾರದೆಂಬ ಕಾರಣಕ್ಕೆ ದತ್ತು ಪಡೆಯುವವರ ಮದುವೆ ಪ್ರಮಾಣ ಪತ್ರವನ್ನು ದತ್ತು ಸ್ವೀಕಾರ ಪ್ರಕ್ರಿಯೆ ವೇಳೆ ಹಾಜರುಪಡಿಸಬೇಕೆಂಬ ನಿಯಮವಿದೆ.
ರೈಲು ಪ್ರಯಾಣಕ್ಕೆ ಲಸಿಕೆ ಕಡ್ಡಾಯವೆಂಬುದು ಮೂಲಭೂತ ಹಕ್ಕುಗಳ ಉಲ್ಲಂಘನೆ…! ಬಾಂಬೆ ಹೈಕೋರ್ಟ್ ಅಭಿಪ್ರಾಯ
ಇನ್ನೊಂದೆಡೆ 1956ರ ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆಯ ಪ್ರಕಾರ, ಒಬ್ಬ ಪೋಷಕರು ಸಹ ಮಗುವನ್ನು ದತ್ತು ಪಡೆಯಬಹುದು ಎಂದಿದೆ. ಇದನ್ನು ಸಹ ಕೋರ್ಟ್ ಪರಿಗಣಿಸಿ ತನ್ನ ಅಭಿಪ್ರಾಯ ನೀಡಿದೆ.
ಫೆಬ್ರವರಿ 9ರಂದು ತೃತೀಯ ಲಿಂಗಿ ರೀನಾ ಕಿನ್ನರ್ ಮತ್ತು ಅವರ ಸಂಗಾತಿಯು ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ದತ್ತು ಸ್ವೀಕಾರಕ್ಕೆ ಮದುವೆ ಸರ್ಟಿಫಿಕೇಟ್ ಬೇಡವೆಂಬ ಅಭಿಪ್ರಾಯ ನೀಡಿದೆ.
ರೀನಾ 1983ರಲ್ಲಿ ಜನಿಸಿದ್ದು, ಅವರು ಡಿಸೆಂಬರ್ 16, 2000ರಂದು ವಾರಣಾಸಿಯ ಅರ್ದಾಲಿ ಬಜಾರ್‌ನಲ್ಲಿರುವ ಮಹಾಬೀರ್ ಮಂದಿರದಲ್ಲಿ ತಮ್ಮ ಸಂಗಾತಿಯನ್ನು ವಿವಾಹವಾದರು. ಬಳಿಕ ಅರ್ಜಿದಾರರು ಮಗುವನ್ನು ದತ್ತು ಪಡೆಯಲು ಕೋರಿ ಅರ್ಜಿ ಸಲ್ಲಿದ್ದರು.
ಆದರೆ ಮದುವೆ ಪ್ರಮಾಣಪತ್ರ ಹಾಜರುಪಡಿಸಬೇಕೆಂದು ದತ್ತು ನೀಡುವ ವ್ಯವಸ್ಥೆ ನಿರ್ವಹಿಸುವ ಅಧಿಕಾರಿ ತಿಳಿಸಿದ್ದರು. ಆ ಜೋಡಿ ಪ್ರಮಾಣಪತ್ರ ಹೊಂದಿರಲಿಲ್ಲ. ಹೀಗಾಗಿ ನ್ಯಾಯಾಲಯದ ಕದ ತಟ್ಟಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿವೇಕ್ ವರ್ಮಾ ಮತ್ತು ನ್ಯಾಯಮೂರ್ತಿ ಡಾ. ಕೌಶಲ್ ಜಯೇಂದ್ರ ಠಾಕರ್ ಅವರನ್ನೊಳಗೊಂಡ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.