alex Certify ’ಒಂಟಿ ಸಲಗ’ ಹಿಮ್ಮೆಟ್ಟಿಸಿ ರೈತರ ಪ್ರಾಣ ಉಳಿಸಿದ ಅರಣ್ಯಾಧಿಕಾರಿ ಈಗ ಜನರ ಕಣ್ಣಲ್ಲಿ ಹೀರೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಒಂಟಿ ಸಲಗ’ ಹಿಮ್ಮೆಟ್ಟಿಸಿ ರೈತರ ಪ್ರಾಣ ಉಳಿಸಿದ ಅರಣ್ಯಾಧಿಕಾರಿ ಈಗ ಜನರ ಕಣ್ಣಲ್ಲಿ ಹೀರೋ….!

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಆನೆಗಳು ಬೆಳೆ ನಾಶ ಮಾಡುವುದು, ಮನುಷ್ಯರ ಮೇಲೆ ಎರಗುವುದು ವರ್ಷ ಪೂರ್ತಿ ಕೇಳುವ ಸುದ್ದಿಗಳಾಗಿವೆ. ಕೆಲವು ಕಡೆಗಳಲ್ಲಂತೂ ರೈತರನ್ನು ಆನೆಗಳು ಕೊಂದು ಹಾಕಿದ ನಿದರ್ಶನಗಳೂ ಇವೆ. ಇದಕ್ಕೆ ಮನುಷ್ಯನು ದುರಾಸೆಯಿಂದ ಮಾಡಿದ ಅರಣ್ಯ ನಾಶವೂ ಒಂದು ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗೆಯೇ, ಒಡಿಶಾದ ಗ್ರಾಮವೊಂದರ ಬಳಿ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದ ಮದಗಜವೊಂದನ್ನು ಅರಣ್ಯಾಧಿಕಾರಿಯೊಬ್ಬರೇ ಹಿಂದಿರುಗಿಸಿ ಶೌರ್ಯ ಮೆರೆದಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಬಲ್ಪುರ ಜಿಲ್ಲೆ ರೆಧಾಕೋಲ್‌ ಅರಣ್ಯ ವಿಭಾಗ ವ್ಯಾಪ್ತಿಗೆ ಬರುವ ಚಡ್ಚಡಿ ಹಾಗೂ ಅಂಗಬಿರಾ ಗ್ರಾಮದ ಅರಣ್ಯ ಪ್ರದೇಶದ ಬಳಿಯ ಜಮೀನಿಗೆ ಇತ್ತೀಚೆಗೆ ಆನೆಯೊಂದು ನುಗ್ಗಿದೆ. ಬೆಳೆ ಹಾನಿ ಮಾಡುವ ಜತೆಗೆ ಜಮೀನಿನಲ್ಲಿದ್ದ ರೈತರ ಮೇಲೂ ದಾಳಿ ಮಾಡುವ ಸಾಧ್ಯತೆಯ ಪರಿಸ್ಥಿತಿ ಸೃಷ್ಟಿಯಾಗಿದೆ. ಇದೇ ವೇಳೆ ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿ ಚಿತ್ತರಂಜನ್‌ ಮಿರಿ ಅವರು ಏಕಾಂಗಿಯಾಗಿಯೇ ಆನೆಯ ಜತೆ ಕಾದಾಡಿ, ಬರೀ ಒಂದು ದೀವಟಿಗೆಯನ್ನು ಬಳಸಿಯೇ ಆನೆಯನ್ನು ಬೆದರಿಸಿ ವಾಪಸ್‌ ಕಳುಹಿಸಿದ್ದಾರೆ.

’ಕರ್ಮ ರಿಟರ್ನ್ಸ್‌’ ಎಂದರೆ ಇದೇ ಅಲ್ಲವೇ….? ಶ್ವಾನಕ್ಕೆ ಒದೆಯಲು ಹೋಗಿ ತಾನೇ ಬಿದ್ದ ವ್ಯಕ್ತಿ…!

ಬೆಳೆಗಳ ಹಾನಿ ಹಾಗೂ ಮನುಷ್ಯರ ಮೇಲೆ ದಾಳಿ ಮಾಡುವ ಆನೆಗಳನ್ನು ಹೇಗೆ ಸುಲಭವಾಗಿ ಕಾಡಿಗೆ ಕಳುಹಿಸಬೇಕು ಎಂಬ ಕುರಿತು ನಮಗೆ ತರಬೇತಿ ನೀಡಲಾಗಿದೆ.

ಅದರಂತೆ ದೀವಟಿಗೆ ಬಳಸಿ ಆನೆಯನ್ನು ಕಾಡಿಗೆ ಕಳುಹಿಸಿದ್ದೇನೆ, ಎಂದು ಮಿರಿ ಹೇಳಿದ್ದಾರೆ. ಒಟ್ಟಿನಲ್ಲಿ ಆನೆಗಳನ್ನು ಕಂಡರೆ ಓಡಿ ಹೋಗುವವರ ಮಧ್ಯೆ ಅದನ್ನು ಕಾಡಿಗೆ ವಾಪಸ್‌ ಕಳುಹಿಸಿ ಜನರ ಪ್ರಾಣ ಉಳಿಸಿದ ಅರಣ್ಯಾಧಿಕಾರಿ ಬಗ್ಗೆ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹಲವು ಮಾಧ್ಯಮಗಳು ವರದಿ ಮಾಡಿದ್ದು, ಜಾಲತಾಣದಲ್ಲೂ ಇವರ ಶೌರ್ಯದ ವೀಡಿಯೊ ವೈರಲ್‌ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...