ಮಗಳ ಎದುರೇ ತಾಯಿಯ ಕತ್ತು ಸೀಳಿ ಕೊಂದಿರುವ ಹೃದಯ ವಿದ್ರಾವಕ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. 55 ವರ್ಷದ ಮಹಿಳೆಯನ್ನ ದುಷ್ಕರ್ಮಿಗಳು ಕೊಂದಿದ್ದು, ದೆಹಲಿಯ ಅಂಬೇಡ್ಕರ್ ನಗರದಲ್ಲಿ ಈ ಘಟನೆ ನಡೆದಿದೆ.
ಫೆಬ್ರವರಿ 19 ರಂದು ಪೊಲೀಸರಿಗೆ ಮಹಿಳೆಯೊಬ್ಬರನ್ನ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂಬ ಕರೆ ಬಂದಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ನೋಡಿದಾಗ ಮನೆಯ ಮೊದಲ ಮಹಡಿಯಲ್ಲಿ, 55 ವರ್ಷದ ಸುಧಾರಾಣಿ ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಈ ಸ್ಥಿತಿಯನ್ನು ನೋಡಿದ ಪೊಲೀಸರು ಮಹಿಳೆ ಬದುಕುಳಿದಿಲ್ಲಾ ಎಂದು ಖಚಿತಪಡಿಸಿಕೊಂಡರು.
BIG BREAKING: ನಂದಿಬೆಟ್ಟದಲ್ಲಿ ಅವಘಡ; ಟ್ರೆಕ್ಕಿಂಗ್ ಹೋಗಿ ಜಾರಿಬಿದ್ದ ಯುವಕ; ರಕ್ಷಣೆಗಾಗಿ ಮೊರೆ
ಫೆಬ್ರವರಿ 19ರ ರಾತ್ರಿ 9:30ರ ಸುಮಾರಿಗೆ ಇಬ್ಬರು ಮನೆಗೆ ನುಗ್ಗಿದ್ದು, ಅವರ ಬಳಿ ಬಂದೂಕುಗಳಿದ್ದವು ಎಂದು ಮೃತರ ಪುತ್ರಿ ದೇವಯಾನಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಬ್ಬರು ಮುಖವನ್ನೂ ಮುಚ್ಚಿಕೊಂಡು ತಾಯಿಯ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ. ದರೋಡೆ ಬಳಿಕ ಇಬ್ಬರೂ ಆರೋಪಿಗಳು ಆಕೆಯ ತಾಯಿಯ ಕತ್ತು ಕೊಯ್ದು ಮನೆಯಿಂದ ಹೊರ ಹೋಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಮೃತಳ ಮಗಳ ಹೇಳಿಕೆಯಲ್ಲಿ ಸಾಕಷ್ಟು ವಿರೋಧಾಭಾಸಗಳಿವೆ ಎಂದು ಪೊಲೀಸರು ಅನುಮಾನಿಸಿದ್ದಾರೆ. ಸಧ್ಯ ಸುಧಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.