ಸಿನಿಮಾದಲ್ಲಿ ಕಾಣಿಸುವ ಹೀರೋಗಳನ್ನು ಆರಾಧಿಸೋಕೆ ಭಾರತೀಯರಿಗೆ ಹೆಚ್ಚಿಗೆ ಹೇಳಿಕೊಡಬೇಕಾಗಿಲ್ಲ. ಯಾವುದಾದರೊಂದು ನಾಯಕ ನಟ ಇಷ್ಟವಾದರು ಅಂದರೆ ಮುಗೀತು ಅಭಿಮಾನಿಗಳು ಅವರದ್ದೇ ಸ್ಟೈಲ್ನ್ನು ಫಾಲೋ ಮಾಡಲು ಆರಂಭಿಸುತ್ತಾರೆ.
ಅದೇ ರೀತಿ ರಣಬೀರ್ ಕಪೂರ್ ಅಭಿಮಾನಿ ಕೂಡ ತನ್ನ ನೆಚ್ಚಿನ ನಟನಂತೆ ಟ್ಯಾಟೂ ಹಾಕಿಸಿಕೊಂಡಿದ್ದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಚಾರವಾಗಿದೆ.
ಕಾರಿನಲ್ಲಿದ್ದ ಬಾಲಿವುಡ್ ನಟ ರಣಬೀರ್ ಕಪೂರ್ ಬಳಿ ಬಂದ ಅಭಿಮಾನಿಯೊಬ್ಬ ತಾನೂ ಕೂಡ ನಿಮ್ಮಂತೆ ‘ಆವಾರಾ’ ಎಂಬ ಟ್ಯಾಟೂವನ್ನು ಕೈ ಮೇಲೆ ಹಾಕಿಸಿಕೊಂಡಿದ್ದೇನೆ ಎಂದು ತೋರಿಸಿದ್ದಾರೆ.
ಇದನ್ನು ನೋಡಿದ ರಣಬೀರ್ ಕಪೂರ್ ಇದು ಸ್ಟಿಕ್ಕರ್ ಎಂದು ಲೇವಡಿ ಮಾಡಿದ್ದಾರೆ. ಅಭಿಮಾನಿಯು, ಇಲ್ಲ ನಾನು ನಿಜವಾಗಿಯೂ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದರೂ ನಂಬದ ರಣಬೀರ್ ಥಂಬ್ಸ್ ಅಪ್ ಮಾಡುತ್ತಾ ಕಾರಿನ ಗಾಜನ್ನು ಏರಿಸಿದ್ದಾರೆ. ಅಭಿಮಾನಿಯ ಎದುರು ರಣಬೀರ್ ಕಪೂರ್ರ ಈ ನಡವಳಿಕೆ ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ.
SHOCKING: ಅನೈತಿಕ ಸಂಬಂಧ ಬೆಳೆಸಿದ ಅಣ್ಣ-ತಂಗಿಯಿಂದಲೇ ಘೋರ ಕೃತ್ಯ
ಏನಿದು ಆವಾರಾ ಟ್ಯಾಟೂ..?
2013ರಲ್ಲಿ ರಣಬೀರ್ ಕಪೂರ್ ಕೈಯಲ್ಲಿ ಇದೇ ರೀತಿ ಆವಾರಾ ಎಂದು ಬರೆಯಲಾದ ಟ್ಯಾಟೂ ಸಾಕಷ್ಟು ಬಾರಿ ಕಾಣಿಸಿಕೊಂಡಿದೆ. ದೀಪಿಕಾ ಪಡುಕೋಣೆ ಜೊತೆಯಲ್ಲಿ ನಟಿಸಿದ ಯೇ ಜವಾನಿ ಹೈ ದಿವಾನಿ ಸಿನಿಮಾದ ಪ್ರಮೋಷನ್ ವೇಳೆಯಲ್ಲಿ ರಣಬೀರ್ ಕೈಯಲ್ಲಿ ಈ ರೀತಿಯ ಟ್ಯಾಟೂ ಇರುವುದನ್ನು ಅನೇಕರು ಗಮನಿಸಿದ್ದರು.
ಆದರೆ ಇದು ಶಾಶ್ವತ ಟ್ಯಾಟೋವೋ ಅಥವಾ ತಾತ್ಕಾಲಿಕವೋ ಎಂಬುದು ಯಾರಿಗೂ ತಿಳಿದಿಲ್ಲ. ಆವಾರಾ 1951ರಲ್ಲಿ ತೆರೆ ಕಂಡ ರಣಬೀರ್ ಕಪೂರ್ರ ಅಜ್ಜ ರಾಜ್ ಕಪೂರ್ರ ಹಿಟ್ ಸಿನಿಮಾವಾಗಿತ್ತು.
ರಣಬೀರ್ ಕಪೂರ್ರಂತೆಯೇ ತಾನೂ ಟ್ಯಾಟೂ ಹಾಕಿಸಿಕೊಂಡಿದ್ದ ಅಭಿಮಾನಿಯ ಜೊತೆಯಲ್ಲಿ ರಣಬೀರ್ ನಡೆದುಕೊಂಡ ರೀತಿ ನೆಟ್ಟಿಗರಿಗೆ ಇಷ್ಟವಾದಂತೆ ಕಾಣುತ್ತಿಲ್ಲ. ಅನೇಕರು ರಣಬೀರ್ ಕಪೂರ್ ಅಭಿಮಾನಿಗೆ ಗೌರವ ನೀಡಿಲ್ಲ ಎಂದು ಕಿಡಿಕಾರಿದ್ದಾರೆ. ಇನ್ನು ಕೆಲವರು ಇಂತವರನ್ನು ಆರಾಧಿಸುತ್ತಾ ಟ್ಯಾಟೂ ಹಾಕಿಸಿಕೊಳ್ಳುವ ಬದಲು ನಿಮ್ಮ ಪೋಷಕರ ಹೆಸರನ್ನಾದರೂ ಟ್ಯಾಟೂ ಹಾಕಿಸಿ ಎಂದು ಕಿವಿಮಾತು ಹೇಳಿದ್ದಾರೆ.
https://youtu.be/AW3_zTa5J5U