ಬರೋಬ್ಬರಿ 27 ವರ್ಷಗಳ ಬಳಿಕ ಬಾಂಬೆ ಹೈಕೋರ್ಟ್ ಸೇನಾ ಯೋಧನನ್ನು ಕೊಲೆ ಆರೋಪದಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಪ್ರಸನ್ನ ವರಾಳೆ ಹಾಗೂ ನ್ಯಾಯಮೂರ್ತಿ ಎನ್ ಆರ್ ಬೋರ್ಕರ್ ನೇತೃತ್ವದ ವಿಭಾಗೀಯ ಪೀಠವು ಸೆಷನ್ಸ್ ನ್ಯಾಯಾಲಯವು ನೀಡಿದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ಬಳಿಕ ಈ ತೀರ್ಪನ್ನು ನೀಡಿದೆ.
1998ರಲ್ಲಿ ಸೆಷನ್ಸ್ ನ್ಯಾಯಾಲಯವು ಪತ್ನಿಯನ್ನು ಉಸಿರುಗಟ್ಟಿಸಿ ಕೊಂದ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಈ ವೇಳೆಯಲ್ಲಿ ಆರೋಪಿಯು ಪಾಟ್ನಾದ ದಾನಪುರದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನ್ಯಾಯಾಲಯವು ಪತ್ನಿಯನ್ನು ಕೊಂದ ಆರೋಪದಲ್ಲಿ ಇವರನ್ನು ಅಪರಾಧಿ ಎಂದು ಘೋಷಿಸಿತು.
ಸೇನಾ ಸಿಬ್ಬಂದಿಯ ಪತ್ನಿಯ ಸಾವು ಕೊಲೆ ಎಂದು ಹೇಳಲು ಸೂಕ್ತವಾದ ಸಾಕ್ಷ್ಯಗಳು ದೊರಕದ ಕಾರಣ ಹೈಕೋರ್ಟ್ ಪತಿಯನ್ನು ಆರೋಪ ಮುಕ್ತಗೊಳಿಸಿದೆ.
ಪತಿ ಕಿರುಕುಳ ನೀಡುತ್ತಾರೆ ಎಂದು ಆರೋಪಿಸುತ್ತಿದ್ದ ಪತ್ನಿ ಮೋನಿಕಾ ತನ್ನ ತವರು ಮನೆಗೆ ಹಿಂತಿರುಗಿದ್ದವಳು ಮತ್ತೆ ಪಾಟ್ನಾಗೆ ವಾಪಸ್ ಬಂದಿರಲಿಲ್ಲ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಮಂಕನ್ವುರ್ ದೇಶಮುಖ್ ನ್ಯಾಯಾಲಯಕ್ಕೆ ತಿಳಿಸಿದರು.
ಇದಾದ ಬಳಿಕ ವ್ಯಕ್ತಿಯು ಪತ್ನಿಯ ಮನೆಗೆ ತೆರಳಿ ಆಕೆಯ ಪೋಷಕರನ್ನು ಪತ್ನಿಯನ್ನು ತನ್ನೊಡನೆ ಕಳುಹಿಸಿಕೊಡಿ ಎಂದು ಅತ್ತೆ – ಮಾವನ ಮನವೊಲಿಸುವಲ್ಲಿ ಯಶಸ್ವಿಯಾದರು. 1995ರ ಜುಲೈ ತಿಂಗಳಲ್ಲಿ ಮದ್ಯದ ಅಮಲಿನಲ್ಲಿದ್ದ ಆರೋಪಿಯು ಪತ್ನಿಯನ್ನು ಕೊಚ್ಚಿ ಸಾಯಿಸಿದ್ದಾನೆ ಎಂದು ದೇಶ್ಮುಖ್ ಹೇಳಿದರು.
ಮೃತಳ ಕುಟುಂಬಸ್ಥರು ಆಸ್ಪತ್ರೆಗೆ ಹೋದಾಗ ಆಕೆಯ ಬಾಯಿ ಮತ್ತು ಮೂಗಿನಿಂದ ನೊರೆ ಬರುತ್ತಿರುವುದು ಕಂಡು ಎಫ್‌ಐಆರ್ ದಾಖಲಿಸಲಾಗಿದ್ದರು ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಸೇನಾ ಸಿಬ್ಬಂದಿಯ ಪರ ವಾದ ಮಂಡಿಸಿದ ಅವರ ವಕೀಲ ಹಿತೇನ್ ವೆನೆಗಾಂವ್ಕರ್, ಮೃತರ ದೇಹದಲ್ಲಿ ಯಾವುದೇ ಗುರುತುಗಳು ಕಂಡುಬಂದಿಲ್ಲ, ಇದು ಕೊಲೆ ಎಂಬ ಆರೋಪವನ್ನು ತಳ್ಳಿಹಾಕಿದೆ. ಮೋನಿಕಾಗೆ ಕಿರುಕುಳ ನೀಡಲಾಗುತ್ತಿದೆ ಎಂಬುದಕ್ಕೆ ಸಾಕ್ಷ್ಯವನ್ನು ತೋರಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದರು.
ಶವಪರೀಕ್ಷೆಯ ವರದಿಯಲ್ಲಿ ಮೋನಿಕಾ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ ಮತ್ತು ಅವರ ಶ್ವಾಸಕೋಶವು ತೀವ್ರವಾಗಿ ಹಾನಿಗೊಳಗಾಗಿತ್ತು ಎಂದು ತಿಳಿದುಬಂದಿದೆ. ಮೋನಿಕಾ ಅವರ ಸಾವು ನರಹತ್ಯೆ ಎಂದು ವಿಚಾರಣಾ ನ್ಯಾಯಾಲಯ ತಪ್ಪಾಗಿ ಹೇಳಿದೆ ಎಂದು ವೆನೆಗಾಂವ್ಕರ್ ವಾದಿಸಿದ್ದರು.