ಐಷಾರಾಮಿ ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಸರಕು ಸಾಗಣೆಯ ಹಡಗೊಂದು ಬೆಂಕಿಗೆ ಆಹುತಿಯಾದ ಪರಿಣಾಮ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿ ಹೋಗಿದೆ. ಬೃಹತ್ ಹಡಗಿನಲ್ಲಿದ್ದ 22 ಸಿಬ್ಬಂದಿಯನ್ನು ಘಟನಾ ಸ್ಥಳದಿಂದ ಸ್ಥಳಾಂತರಿಸಲಾಗಿದೆ. ಸುಡುತ್ತಿದ್ದ ಕಾರುಗಳ ಜೊತೆಯಲ್ಲಿ ಫೆಲಿಸಿಟಿ ಏಸ್ ಮಧ್ಯ ಅಟ್ಲಾಂಟಿಕ್ ಅಜೋರ್ಸ್ ದ್ವೀಪಗಳ ಬಳಿ ತೇಲಿದೆ. ಈ ಹಡಗು ಜರ್ಮನಿಯ ಎಂಡೆನ್ನಿಂದ ಅಮೆರಿಕದ ರೋಡ್ ಐಲ್ಯಾಂಡ್ನ ಡೇವಿಸ್ವಿಲ್ಲೆ ಬಂದರಿಗೆ ನೌಕಾಯಾನ ಮಾಡುತ್ತಿತ್ತು.
ಫೆಲಿಸಿಟಿ ಏಸ್ 17 ಸಾವಿರ ಮೆಟ್ರಿಕ್ ಟನ್ಗಿಂತ ಹೆಚ್ಚಿನ ಸರಕನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಸಾಮಾನ್ಯವಾಗಿ ಇದನ್ನು ಸಾವಿರಾರು ಕಾರುಗಳನ್ನು ಸಾಗಿಸಲು ಬಳಕೆ ಮಾಡಲಾಗುತ್ತದೆ.
ಪೋರ್ಚುಗೀಸ್ ನೌಕಾಪಡೆಯ ಹಡಗು ಜರ್ಮನಿಯಿಂದ ಯುನೈಟೆಡ್ ಸ್ಟೇಟ್ಸ್‌ಗೆ ಅಟ್ಲಾಂಟಿಕ್ ಸಮುದ್ರಯಾನದಲ್ಲಿ ವಾಹನ ಸಾಗಣೆ ಮಾಡುತ್ತಿತ್ತು. ಬೆಂಕಿ ಇನ್ನೂ ಉರಿಯುತ್ತಿದ್ದು ಆ ಸ್ಥಳದಾದ್ಯಂತ ದಟ್ಟ ಹೊಗೆ ಮಂಜಿನಂತೆ ಆವರಿಸಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ.