ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ಸಂಘರ್ಷ ತಾರಕಕ್ಕೇರಿದ ಬೆನ್ನಲ್ಲೇ ಪಿಯು ಕಾಲೇಜು ಉಪನ್ಯಾಸಕಿಯೊಬ್ಬರು ರಾಜೀನಾಮೆ ನೀಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜೈನ್ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಚಾಂದಿನಿ ಎಂಬುವವರು ಹಿಜಾಬ್ ವಿವಾದ ಕಾರಣದಿಂದಾಗಿ ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಉಪನ್ಯಾಸಕಿ ಚಾಂದಿನಿ. ತಾನು ಕಳೆದ ಮೂರು ವರ್ಷಗಳಿಂದ ಜೈನ್ ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೆ. ಮೂರು ವರ್ಷಗಳಿಂದಲೂ ಹಿಜಾಬ್ ಧರಿಸಿಯೇ ಕಾಲೇಜಿಗೆ ಬಂದು ಪಾಠ ಮಾಡುತ್ತಿದ್ದೇನೆ. ಆದರೆ ಇದೀಗ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಧಾರ್ಮಿಕ ಗುರುತಿಗೆ ಅವಕಾಶವಿಲ್ಲ ಎಂದು ಸೂಚಿಸಲಾಗಿದೆ.
ಮದ್ಯದಂಗಡಿಯಲ್ಲಿ ನೂಕಿದ ಕಾರಣಕ್ಕೆ ಯುವಕನನ್ನೇ ಕೊಲೆಗೈದ ಪಾಪಿ….!
ಹಾಗಾಗಿ ಹಿಜಾಬ್ ಧರಿಸಿ ಬರುವಂತಿಲ್ಲ ಎಂದು ಕಾಲೇಜು ಆಡಳಿತ ಮಂಡಿಳಿ ತಿಳಿಸಿದೆ. ಏಕಾಏಕಿ ಹಿಜಾಬ್ ತೆಗೆದು ಬರಬೇಕು ಎಂಬ ಕಾಲೇಜು ಸೂಚನೆಯಿಂದ ನನ್ನ ಆತ್ಮಗೌರವಕ್ಕೆ ಧಕ್ಕೆಯಾಗುತ್ತಿದೆ. ಮೂರು ವರ್ಷಗಳಿಂದಲೂ ಹಿಜಾಬ್ ಧರಿಸಿ ಬಂದು ಪಾಠ ಮಾಡುತ್ತಿದ್ದರು ಈವರೆಗೂ ಯಾವುದೇ ಸಮಸ್ಯೆಯಾಗಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಹೊಸ ಆದೇಶ ಹೊರಡಿಸಿರುವುದರಿಂದ ಬೇಸರವಾಗಿದೆ. ಇದಕ್ಕೆ ಉಪನ್ಯಾಸಕಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಉಪನ್ಯಾಸಕಿ ಚಾಂದಿನಿ ರಾಜೀನಾಮೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.