alex Certify ನಾನು ಪಕ್ಷದ ಬಾಡಿಗೆದಾರನಲ್ಲ, ಪಾಲುದಾರ, ಕಾಂಗ್ರೆಸ್ ನಾಯಕರಿಗೆ ಮನೀಶ್ ತಿವಾರಿ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಪಕ್ಷದ ಬಾಡಿಗೆದಾರನಲ್ಲ, ಪಾಲುದಾರ, ಕಾಂಗ್ರೆಸ್ ನಾಯಕರಿಗೆ ಮನೀಶ್ ತಿವಾರಿ ಟಾಂಗ್

ಪಂಜಾಬ್ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಮನೀಶ್ ತಿವಾರಿ ಪಕ್ಷ ತೊರೆಯಲಿದ್ದಾರೆ ಎಂಬ ಊಹಾಪೋಹಗಳು ಹೆಚ್ಚಿವೆ‌. ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೀಶ್ ತಿವಾರಿ ನಾನು ಕಾಂಗ್ರೆಸ್‌ ಪಕ್ಷದ ಬಾಡಿಗೆದಾರನಲ್ಲ, ಬದಲಿಗೆ ಪಾಲುದಾರ ಎಂದಿದ್ದಾರೆ.

ರಾಜೀನಾಮೆ‌ ಊಹಾಪೋಹಗಳನ್ನು ತಳ್ಳಿಹಾಕಿರುವ ಅವರು 40 ವರ್ಷಗಳಿಂದ ಕಾಂಗ್ರೆಸ್ ಜೊತೆಗಿದ್ದೇ‌ನೆ. ಯಾರಾದರೂ ನನ್ನನ್ನು ಹೊರತಳ್ಳುವವರೆಗೆ ಪಕ್ಷವನ್ನು ತೊರೆಯುವುದಿಲ್ಲ ಎಂದಿದ್ದಾರೆ‌‌. ಈ ಮೂಲಕ ಕಾಂಗ್ರೆಸ್ ನಾಯಕರ ಇಚ್ಛೆಯಿಲ್ಲದೆ ನಾನು ರಾಜೀನಾಮೆ‌ ನೀಡಲೂ ಸಾಧ್ಯವಿಲ್ಲವೆಂದು ಪರೋಕ್ಷವಾಗಿ ಹೇಳಿದ್ದಾರೆ.

ಒಬ್ಬ ಸಣ್ಣ ಕಾರ್ಯಕರ್ತನೂ ಕೂಡಾ ಪಕ್ಷವನ್ನು ತೊರೆದರೆ ಅದು ಕಾಂಗ್ರೆಸ್‌ಗೆ ನಷ್ಟ. ಹಿರಿಯ ನಾಯಕರು ಪಕ್ಷ ಬಿಟ್ಟರೆ ಆಗುವ ನಷ್ಟ ಬಹು ದೊಡ್ಡದು. ಹೀಗಾಗಿ ಯಾರಾದರೂ ಹೊರಗೆ ತಳ್ಳದ ಹೊರತು ನಾನು ಪಕ್ಷ ತೊರೆಯುವುದಿಲ್ಲ ಎಂದು ಹೇಳಿದರು.

ವಿಶ್ವ ದಾಖಲೆ ಪುಟ ಸೇರಿದ ಬರೋಬ್ಬರಿ 289 ಗ್ರಾಂ ತೂಕದ ಸ್ಟ್ರಾಬೆರ್ರಿ..!

ಕಾಂಗ್ರೆಸ್ ಹಿರಿಯ ನಾಯಕ ಅಶ್ವನಿ‌ಕುಮಾರ್ ಪಕ್ಷ ತೊರೆದ ಮೇಲೆ ಮನೀಶ್ ಕೂಡ ಅದೇ ದಾರಿಯಲ್ಲಿ ಸಾಗಬಹುದು ಎಂಬ ಚರ್ಚೆ ಪುಷ್ಟಿ ಪಡೆದುಕೊಂಡಿತ್ತು. ಅದರಲ್ಲೂ ಪಂಜಾಬ್ ಚುನಾವಣೆಯ ಈ ಸಂದರ್ಭದಲ್ಲೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮನೀಶ್ ಅವರನ್ನ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಬೇಸರ ಅವರಿಲ್ಲಿದೆ ಎಂದು ವರದಿಯಾಗಿದೆ.

ಇದರಿಂದ ಪಂಜಾಬಿನ ಆನಂದಪುರ ಸಾಹಿಬ್‌ನ ಕಾಂಗ್ರೆಸ್ ಸಂಸದರಾಗಿರುವ ತಿವಾರಿ ಪಕ್ಷವನ್ನು ತೊರೆಯುತ್ತಾರೆ ಎಂಬ ಸುದ್ದಿ ಸದ್ದು ಮಾಡುತ್ತಿತ್ತು. ತಮಗಿರುವ ಬೇಸರವನ್ನೂ ತಮ್ಮ ಮಾತಿನ ದಾಟಿಯಲ್ಲಿ ತಿಳಿಸಿರುವ ಅವರು, ಪಕ್ಷದವರೆ ನನ್ನನ್ನು ಹೊರ ತಳ್ಳುವವರೆಗೂ ಪಕ್ಷ ತೊರೆಯುವುದಿಲ್ಲ ಎಂದಿದ್ದಾರೆ‌‌. ಇದಕ್ಕೂ ಮುನ್ನ ಟ್ವೀಟ್ ಮಾಡಿದ ತಿವಾರಿ ನಾನು ಮಾತನಾಡಿದರೆ ಅದು ಯುದ್ಧ ಎಂದು ಗ್ರಹಿಸಲಾಗುತ್ತಿದೆ. ಸುಮ್ಮನಿದ್ದರೆ ಅಸಹಾಯಕನಾಗುತ್ತೇನೆ ಎಂದಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...