ಬೆಂಗಳೂರು: ಟೊಮೇಟೊ ದರ ಕೆಜಿಗೆ 10 ರೂಪಾಯಿಗೆ ಇಳಿಕೆಯಾಗಿದ್ದು, ಮತ್ತಷ್ಟು ಬೆಲೆ ಕುಸಿಯುವ ಸಾಧ್ಯತೆಯಿದೆ. ಎರಡು ವಾರದ ಹಿಂದೆ 30 ರೂಪಾಯಿವರೆಗೂ ಇದ್ದ ದರ ಏಕಾಏಕಿ ಕಡಿಮೆಯಾಗಿರುವುದು ಬೆಳೆಗಾರರಿಗೆ ಆತಂಕ ತಂದಿದೆ.
ರಫ್ತು ಪ್ರಮಾಣ ಕುಸಿತ ಮತ್ತು ಹೆಚ್ಚಿನ ಇಳುವರಿಯ ಪರಿಣಾಮ ಮಾರುಕಟ್ಟೆಗೆ ಟೊಮೇಟೊ ಪೂರೈಕೆ ಜಾಸ್ತಿಯಾಗಿದೆ. ಇದರಿಂದ ದರ ಕುಸಿತವಾಗಿದೆ. 1 ಕೆಜಿ ಟೊಮೆಟೊ ದರ 10 ರೂಪಾಯಿಗಿಂತಲೂ ಕಡಿಮೆಯಾಗಿದ್ದು, ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಗಳೂರಿನ ಮಾರುಕಟ್ಟೆಗೆ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಹೊಸಕೋಟೆ, ತುಮಕೂರು, ಶಿಡ್ಲಘಟ್ಟ, ಮುಳಬಾಗಿಲು ಮೊದಲಾದ ಕಡೆಗಳಿಂದ ಪೂರೈಕೆಯಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಟೊಮೆಟೊ ಬರುತ್ತಿರುವುದರಿಂದ ದರ ಕುಸಿತವಾಗಿದೆ. ಉತ್ತಮ ಧಾರಣೆ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಏಕಾೇಕಿ ಕೆಜಿಗೆ 20 ರೂ.ನಷ್ಟು ಕಡಿಮೆಯಾಗಿರುವುದು ನುಂಗಲಾರದ ತುತ್ತಾಗಿದೆ.