ಇಂದೋರ್ನಲ್ಲಿರುವ ಸೆಂಟ್ರಲ್ ಜೈಲು ತನ್ನದೇ ಆದ ಎಫ್ಎಂ ರೇಡಿಯೋ ಚಾನೆಲ್ ‘ಜೈಲ್ ವಾಣಿ-ಎಫ್ಎಂ 18.77’ ಅನ್ನು ಸ್ಥಾಪಿಸಿದೆ. ಈ ಹೊಸ ಎಫ್ಎಂ ಚಾನೆಲ್ ನಾಲ್ಕು ಗೋಡೆಗಳ ಬೆಳವಣಿಗೆಗಳ ಬಗ್ಗೆ ಕೈದಿಗಳಿಗೆ ಮಾಹಿತಿಯನ್ನು ನೀಡುತ್ತದೆ.
ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಈ ರೇಡಿಯೋ ಚಾನೆಲ್ ಕೈದಿಗಳಿಗೆ ದಿನನಿತ್ಯದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವುದು ಮಾತ್ರವಲ್ಲದೇ ಕೈದಿಗಳಿಗೆ ಮನರಂಜನೆಯನ್ನೂ ನೀಡುತ್ತದೆ ಎಂದು ತಿಳಿದುಬಂದಿದೆ.
ಕೈದಿಗಳು ಆರೋಗ್ಯ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿಯ ಜೊತೆಯಲ್ಲಿ ಮನರಂಜನಾ ಕಾರ್ಯಕ್ರಮಗಳನ್ನೂ ಆನಂದಿಸಬಹುದಾಗಿದೆ ಎಂದು ಜೈಲಿನ ಸೂಪರಿಟೆಂಡೆಂಟ್ ಅಲ್ಕಾ ಸೋನ್ಕರ್ ಮಾಹಿತಿ ನೀಡಿದರು.
ಈ ರೇಡಿಯೋ ಚಾನೆಲ್ಗಳ ಮೂಲಕ ಕೈದಿಗಳು ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.