
ಬಾಬಿ ಡಿಯೋಲ್ನ ಲಿಂಕ್-ಅಪ್ ವದಂತಿಗಳನ್ನು ನಾವು ಎಂದಿಗೂ ನೋಡಿಲ್ಲವಾದರೂ, ರೇಸ್ 3 ನಟ, ನೀಲಂ ಅವರೊಂದಿಗೆ 5 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದು, ಜೋಡಿಯು ತಮ್ಮ ಪಾಲುದಾರರೊಂದಿಗೆ ನೆಲೆಗೊಳ್ಳುವ ಮೊದಲು ನಿಮಗೆ ಆಶ್ಚರ್ಯವಾಗುತ್ತದೆ. ಆ ಸಮಯದಲ್ಲಿ ಈ ಜೋಡಿ ಬೇರ್ಪಡಲು ಪೂಜಾ ಭಟ್ ಕಾರಣ ಎಂದು ವದಂತಿಗಳು ಇದ್ದಾಗ, ನೀಲಂ ಅವರ ಬ್ರೇಕಪ್ ಬಗ್ಗೆ ಪ್ರತಿಕ್ರಿಯಿಸಿ ಪೂಜಾ ಅವರ ಒಳಗೊಳ್ಳುವಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು.
ಬಾಬಿ ಡಿಯೋಲ್ ಬಗ್ಗೆ ಬಾಲಿವುಡ್ನಲ್ಲಿ ಸಾಕಷ್ಟು ವದಂತಿಗಳು ಹರಡಿಲ್ಲವಾದರೂ ಸಹ ನೀಲಂ ಜೊತೆಯಲ್ಲಿ ಬಾಬಿ ಡಿಯೋಲ್ ಐದು ವರ್ಷಗಳ ಕಾಲ ಡೇಟಿಂಗ್ನಲ್ಲಿದ್ದರು ಎಂಬ ವಿಚಾರ ಅಭಿಮಾನಿಗಳಿಗೆ ಆಶ್ಚರ್ಯ ತರಿಸಿತ್ತು. ಆದರೆ ಕಾಲಾಂತರದಲ್ಲಿ ಇಬ್ಬರೂ ಪ್ರತ್ಯೇಕ ವಿವಾಹವಾಗಿದ್ದು ಪ್ರಸ್ತುತ ತಮ್ಮ ಸಂಗಾತಿಗಳ ಜೊತೆ ಇದ್ದಾರೆ. ಆದರೆ ಇವರಿಬ್ಬರು ದೂರವಾಗಲು ಪೂಜಾ ಭಟ್ ಕಾರಣ ಎಂಬ ಗುಸುಗುಸು ಕೂಡ ಹರಿದಾಡಿತ್ತು. ಆದರೆ ಇವರಿಬ್ಬರ ಸಂಬಂಧ ಹಳಸಲು ನಿಜವಾಗಿಯೂ ನಟಿ ಪೂಜಾ ಭಟ್ ಕಾರಣವಾಗಿದ್ದರಾ ಎಂಬುದರ ಕುರಿತು ಇದೀಗ ನೀಲಂ ಮೌನ ಮುರಿದಿದ್ದಾರೆ.
ನಾನು ಹಾಗೂ ಬಾಬಿ ಡಿಯೋಲ್ ಬೇರ್ಪಟ್ಟಿರೋದು ಸತ್ಯವಾದ ವಿಚಾರವೇ. ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ಕೆಲವೊಂದು ಬಾರಿ ಆಧಾರವೇ ಇಲ್ಲದ ವದಂತಿಗಳು ಹರಿದಾಡಿಬಿಡುತ್ತದೆ. ಅಂತಹ ಸಂದರ್ಭಗಳಲ್ಲಿ ಸ್ಪಷ್ಟನೆಯನ್ನು ನೀಡಲೇಬೇಕಾಗುತ್ತದೆ. ಅಸತ್ಯ ವಿಚಾರಗಳನ್ನು ಜನರು ನಂಬುವಂತಾಗಬಾರದು. ಪೂಜಾ ಭಟ್ರಿಂದಾಗಿಯೆ ನನ್ನ ಹಾಗೂ ಬಾಬಿ ಡಿಯೋಲ್ ನಡುವೆ ಬ್ರೇಕಪ್ ಆಯ್ತು ಎಂಬ ವಿಚಾರ ಎಲ್ಲೆಡೆ ಹರಿದಾಡಿತ್ತು. ಆದರೆ ಈ ಸುದ್ದಿ ಶುದ್ಧ ಸುಳ್ಳಾಗಿದೆ. ನಾನು ಪೂಜಾ ಭಟ್ ಅಥವಾ ಇನ್ಯಾವುದೇ ಹುಡುಗಿಯ ಕಾರಣಕ್ಕಾಗಿ ಬಾಬಿ ಡಿಯೋಲ್ ಜೊತೆ ಬ್ರೇಕಪ್ ಮಾಡಿಕೊಂಡಿರಲಿಲ್ಲ. ನಾನು ಒಬ್ಬರಿಗೊಬ್ಬರು ಮಾತನಾಡಿಕೊಂಡು ಒಮ್ಮತದಿಂದ ಈ ನಿರ್ಧಾರ ಕೈಗೊಂಡಿದ್ದೆವು ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ ಬಾಬಿ ಡಿಯೋಲ್ ತಾನ್ಯಾ ಅಹುಜಾರನ್ನು ವರಿಸಿದ್ದರೆ, ನೀಲಂ ನಟ ಸಮೀರ್ ಸೋನಿ ಜೊತೆಯಲ್ಲಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.