alex Certify ಸ್ಮಾರ್ಟ್ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಭರ್ಜರಿ ‘ಬಂಪರ್’ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮಾರ್ಟ್ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಭರ್ಜರಿ ‘ಬಂಪರ್’ ಸುದ್ದಿ

ಕೇಂದ್ರ ಬಜೆಟ್ ಮಂಡನೆಯಾಗಿ ಎರಡು ವಾರಗಳಾಗಿದೆ‌. ಈ ಬಾರಿಯ ಬಜೆಟ್ ಭಾಷಣದಲ್ಲಿ ವಿತ್ತ ಸಚಿವರು, ದೇಶೀಯ ಉತ್ಪಾದನೆಗೆ, ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಘಟಕಗಳಿಗೆ ಮತ್ತಷ್ಟು ಉತ್ತೇಜನ ನೀಡುವತ್ತ ಗಮನಹರಿಸುತ್ತೇವೆ ಎಂದು ಘೋಷಿಸಿದ್ದಾರೆ.

ಈ ಲೆಕ್ಕಾಚಾರ ನೋಡುವುದಾದರೆ, ಪ್ರಸ್ತಾವಿತ ಕಸ್ಟಮ್ ಸುಂಕಗಳ ಜೊತೆಗೆ ತಯಾರಿಕೆಯ ಪರಿಣಾಮವು ಏಪ್ರಿಲ್ 1, 2022 ರಿಂದ ಅಂದರೆ ಹೊಸ ಆರ್ಥಿಕ ವರ್ಷದಿಂದ ಜಾರಿಯಾಗಲಿದೆ. ಇದರಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳು ದುಬಾರಿ ಅಥವಾ ಅಗ್ಗವಾಗಬಹುದು.‌

ಸ್ಮಾರ್ಟ್‌ಫೋನ್‌ಗಳು ಅಗ್ಗವಾಗುವ ಸಾಧ್ಯತೆ

ಮೊಬೈಲ್ ಫೋನ್ ಚಾರ್ಜರ್‌ಗಳ ಟ್ರಾನ್ಸ್‌ಫಾರ್ಮರ್‌ನ ಭಾಗಗಳು, ಮೊಬೈಲ್ ಕ್ಯಾಮೆರಾ ಮಾಡ್ಯೂಲ್‌ನ ಕ್ಯಾಮೆರಾ ಲೆನ್ಸ್ ಮತ್ತು ಇತರ ವಸ್ತುಗಳಿಗೆ ಸರ್ಕಾರವು 5 ರಿಂದ 12.5% ​​ವರೆಗೆ ಕಸ್ಟಮ್ ಸುಂಕದ ರಿಯಾಯಿತಿಗಳನ್ನು ಒದಗಿಸಿದೆ.

ಆದ್ದರಿಂದ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಉತ್ಪಾದನಾ ವೆಚ್ಚವು ಕಡಿಮೆಯಾಗುತ್ತದೆ ಮತ್ತು ಬ್ರ್ಯಾಂಡ್‌ಗಳು ಈ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆಗಳಿವೆ.

ಸ್ಮಾರ್ಟ್ ವಾಚ್‌ಗಳು, ಫಿಟ್‌ನೆಸ್ ಬ್ಯಾಂಡ್‌ಗಳು ಅಗ್ಗವಾಗುವ ಸಾಧ್ಯತೆ

ಸ್ಮಾರ್ಟ್ ವಾಚ್‌ಗಳ ಕೆಲವು ಭಾಗಗಳ ಮೇಲೆ ಮಾರ್ಚ್ 31, 2023 ರವರೆಗೆ ಕಸ್ಟಮ್ ಸುಂಕ ವಿನಾಯಿತಿಯನ್ನು ಮುಂದುವರೆಸಲಾಗಿದೆ. ಇದರಿಂದ ತಯಾರಕರಿಗೆ ಕಡಿಮೆ ವೆಚ್ಚ ತಗುಲುತ್ತದೆ. ಹೀಗಾಗಿ ಸ್ಮಾರ್ಟ್‌ವಾಚ್‌ಗಳ ಬೆಲೆ ಇಳಿಕೆಗೆ ಕಾರಣವಾಗಬಹುದು.

ಹಿಜಾಬ್‌ ಧರಿಸಿ ಸದನಕ್ಕೆ ಬಂದ ಕಾಂಗ್ರೆಸ್‌ ಶಾಸಕಿ

ವೈರ್‌ಲೆಸ್ ಇಯರ್‌ಬಡ್‌ಗಳು ದುಬಾರಿಯಾಗುವ ಸಾಧ್ಯತೆ

ವೈರ್‌ಲೆಸ್ ಇಯರ್‌ಬಡ್‌ಗಳ ಉತ್ಪಾದನೆಯಲ್ಲಿ ಬಳಸುವ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಲಾಗಿದೆ. ಇದು ಉತ್ಪಾದನಾ ವೆಚ್ಚದ ಹೆಚ್ಚಳಕ್ಕೆ ಕಾರಣವಾಗಬಹುದು. ಹೀಗಾಗಿ ವೈರ್‌ಲೆಸ್ ಇಯರ್‌ಬಡ್‌ಗಳು, ನೆಕ್‌ಬ್ಯಾಂಡ್ ಹೆಡ್‌ಫೋನ್‌ಗಳು ಮತ್ತು ಇತರ ರೀತಿಯ ಗ್ಯಾಜೆಟ್‌ಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.‌

ಪ್ರೀಮಿಯಂ ಹೆಡ್‌ಫೋನ್‌ಗಳು ದುಬಾರಿಯಾಗುವ ಸಾಧ್ಯತೆ

ಹೆಡ್‌ಫೋನ್‌ಗಳ ನೇರ ಆಮದಿನ ಮೇಲೆ 20% ಸುಂಕ ಹೆಚ್ಚಿಸಲಾಗಿದೆ. ಅಂದರೆ ಗ್ರಾಹಕರು ಪ್ರೀಮಿಯಂ ಹೆಡ್‌ಫೋನ್‌ಗಳಿಗೆ ಹೆಚ್ಚು ಪಾವತಿಸಲೆಬೇಕು.‌

ರೆಫ್ರಿಜರೇಟರ್‌ಗಳು ದುಬಾರಿಯಾಗುವ ಸಾಧ್ಯತೆ

ಕಂಪ್ರೆಸರ್‌ಗಳಲ್ಲಿ ಬಳಸುವ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಲಾಗಿದೆ. ಇದರರ್ಥ ದೇಶದಲ್ಲಿ ರೆಫ್ರಿಜರೇಟರ್‌ಗಳ ಮೌಲ್ಯ ಹೆಚ್ಚಾಗುವ ಸಾಧ್ಯತೆಯಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...