alex Certify ಮಸೀದಿಯಲ್ಲಿ ಸೇವೆ ಮಾಡಿ ಭ್ರಾತೃತ್ವ ಭಾವ ಸಾರಿದ ಸರ್ದಾರ್‌ಜೀ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಸೀದಿಯಲ್ಲಿ ಸೇವೆ ಮಾಡಿ ಭ್ರಾತೃತ್ವ ಭಾವ ಸಾರಿದ ಸರ್ದಾರ್‌ಜೀ

ಮನುಕುಲಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಉದ್ದೇಶದಿಂದ ’ಸೇವಾ’ಅಭಿಯಾನಕ್ಕೆ ಚಾಲನೆ ಕೊಟ್ಟ ಸಿಖ್ಖರ ದಶಗುರುಗಳು, ಆ ಜನಾಂಗವನ್ನು ಇನ್ನೂ ಸಹ ಈ ಒಳ್ಳೆಯ ಸಂಪ್ರದಾಯ ಪಾಲಿಸಿಕೊಂಡು ಹೋಗಲು ಪ್ರೇರಣೆಯಾಗಿದ್ದಾರೆ.

ಗುರುದ್ವಾರಗಳಲ್ಲಿ ಸ್ವಚ್ಛತೆಯಿಂದ ಹಿಡಿದು ಭಕ್ತರಿಗೆ ಊಟ ಬಡಿಸುವವರೆಗೂ ವಿವಿಧ ರೀತಿಯಲ್ಲಿ ಸೇವೆಗಳನ್ನು ಭಕ್ತರೇ ಮಾಡುವುದನ್ನು ನಾವು ನೋಡಬಹುದು. ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಅಮೃತಸರದ ಬಲ್ಜಿಂದರ್‌ ಸಿಂಗ್ ಬಾಲಿ.

ವೃತ್ತಿಯಲ್ಲಿ ತರಕಾರಿ ವರ್ತಕರಾದ ಬಲ್ಜಿಂದರ್‌ ಸಿಂಗ್, ತಮ್ಮ ಈ ನಿಸ್ವಾರ್ಥ ಸೇವೆಯನ್ನು ಮಸೀದಿಯೊಂದರಲ್ಲಿ ಪ್ರತಿ ಶುಕ್ರವಾರ ಮಾಡಿಕೊಂಡು ಬರುತ್ತಿದ್ದಾರೆ. ಶುಕ್ರವಾರದ ಪ್ರಾರ್ಥನೆ ವೇಳೆ ಅಮೃತಸರದ ಜಮಾ ಖೈರ್‌-ಉದ್-ದೀನ್ ಮಸೀದಿಯಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.

BIG NEWS: ರಾಧಿಕಾರಿಂದ ದೂರವಾಗಲು ಕುಮಾರಸ್ವಾಮಿ ಯಾವ ಪಾಪದ ಹಣ ಕೊಟ್ಟರು….? ಹೆಚ್. ಡಿ. ಕೆ. ವಿರುದ್ಧ ಮಾಜಿ ಶಾಸಕ ಕೆ.ರಾಜು ಗಂಭೀರ ಆರೋಪ

ಇಲ್ಲಿನ ಪಾದರಕ್ಷೆಗಳನ್ನು ಕಾಯಲು ಆರಂಭಿಸಿದಾಗ ನನಗೆ 35 ವರ್ಷ ವಯಸ್ಸು. ಈ ಮುನ್ನ ಭಕ್ತರ ಪಾದರಕ್ಷೆಗಳನ್ನು ಶ್ರೀ ದರ್ಬಾರ್‌ ಸಾಹೀಬ್‌ನಲ್ಲಿ ಇಡುತ್ತಿದ್ದೆವು. ಬಳಿಕ ಅವರು ನನ್ನನ್ನು ಇಲ್ಲಿ ಕೂರಿಸಿದ್ದಾರೆ. ಮಳೆ ಬರಲಿ ಗಾಳಿ ಬೀಸಲಿ, ಪ್ರತಿ ಶುಕ್ರವಾರ ನಾನು ಇಲ್ಲಿಗೆ ಬರುತ್ತೇನೆ ಎನ್ನುತ್ತಾರೆ ಬಲ್ಜಿಂದರ್‌. ತಾವು ಈ ಕೆಲಸ ಮಾಡುತ್ತಿರುವುದು ಎಂದಿಗೂ ಕೀಳರಿಮೆಯ ಭಾವ ತಂದಿಲ್ಲ ಎನ್ನುವ ಬಲ್ಜಿಂದರ್‌, ಇದಕ್ಕಾಗಿ ತಮ್ಮನ್ನು ಯಾರೂ ಸಹ ಕೀಳಾಗಿ ನೋಡಿಯೂ ಇಲ್ಲ ಎಂದಿದ್ದಾರೆ.

ಮಸೀದಿಯ ಆವರಣದಲ್ಲಿ ತಮಗೆ ಮನಃಶ್ಶಾಂತಿ ಸಿಗುವುದಾಗಿ ಹೇಳುವ ಬಲ್ಜಿಂದರ್‌, ತಮ್ಮ ಈ ಕೆಲಸದಿಂದ ಸಾರ್ವತ್ರಿಕ ಭ್ರಾತೃತ್ವದ ಸಂದೇಶ ಸಾರುವ ಪುಣ್ಯದ ಅವಕಾಶವೊಂದು ಸಿಕ್ಕಿದೆ ಎನ್ನುತ್ತಾರೆ.

ಬಲ್ಜಿಂದರ್‌ಗೆ ಲಿವರ್‌ನಲ್ಲಿ ಸಮಸ್ಯೆಯೊಂದು ಕಾಣಿಸಿಕೊಂಡ ಬಳಿಕ, ಅವರಿಗೆ ಮಸೀದಿಯ ಆಡಳಿತ ಸಾಕಷ್ಟು ಸಹಾಯ ಮಾಡಿತ್ತು. ಸರ್ಕಾರದಿಂದ ಯಾವುದೇ ಪಿಂಚಣಿ ಪಡೆಯದ ಬಲ್ಜಿಂದರ್‌, ತಮಗೆ ಮಸೀದಿಯ ಆಡಳಿತದಿಂದ ಈ ಅವಧಿಯಲ್ಲಿ ನೆರವು ಸಿಗದೇ ಇದ್ದಲ್ಲಿ ತಾವು ಇಂದು ಬದುಕುಳಿಯುತ್ತಿರಲಿಲ್ಲ ಎನ್ನುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...