
ವೃತ್ತಿಯಲ್ಲಿ ಬಡಗಿಯಾಗಿರುವ ಮೊಹಮ್ಮದ್ ಮೆಹಬೂಬ್ ಕೆಲಸಕ್ಕಾಗಿ ತಮ್ಮ ಕಾರ್ಖಾನೆಯತ್ತ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ತನ್ನ ಶೌರ್ಯ ಒಂದು ಮಗುವಿನ ಜೀವವನ್ನು ಉಳಿಸುತ್ತದೆ ಎಂಬುದು ತಿಳಿದಿರಲಿಲ್ಲ.
ಫೆಬ್ರವರಿ 5 ರ ಸಂಜೆಯಂದು, ಮೆಹಬೂಬ್ ಮಧ್ಯಪ್ರದೇಶದ ಭೋಪಾಲ್‌ನ ಬರ್ಖೇಡಿ ಪ್ರದೇಶದಲ್ಲಿ ತನ್ನ ಕಾರ್ಖಾನೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ, ಅವರು ಹೋಗುತ್ತಿರುವ ದಾರಿಯಲ್ಲಿ ಗೂಡ್ಸ್ ರೈಲು ಬಂದಿತು, ಈ ವೇಳೆ ಮೆಹಬೂಬ್ ಸೇರಿದಂತೆ ಇತರ ಕೆಲವು ಪಾದಚಾರಿಗಳು ರೈಲು ಹಾದು ಹೋಗಲೆಂದು ಕಾಯುತ್ತಾ ಒಂದು ಬದಿಯಲ್ಲಿ ನಿಂತರು.
ಈ ವೇಳೆ ತನ್ನ ಹೆತ್ತವರೊಂದಿಗೆ ಅದೇ ಜಾಗದಲ್ಲಿ ನಿಂತಿದ್ದ ಬಾಲಕಿಯೊಬ್ಬಳು ರೈಲಿನ ಸದ್ದಿಗೆ ದಿಗ್ಭ್ರಮೆಗೊಂಡಳೊ ಅಥವಾ ಏನಾಯಿತೋ ತಿಳಿಯಲಿಲ್ಲ, ಆಕೆ ಇದ್ದಕ್ಕಿದ್ದಂತೆ ಹಳಿಗಳ ಮೇಲೆ ಬಿದ್ದಳು. ಗೂಡ್ಸ್ ರೈಲು ಹುಡುಗಿಯ ಕಡೆಗೆ ಬರುತ್ತಿದ್ದನ್ನು ನೋಡಿದವರ ಎದೆ ಬಡಿತ ಮತ್ತಷ್ಟು ಜೋರಾಯಿತು. ಆದರೆ ಅಲ್ಲಿದ್ದ ಪ್ರತಿಯೊಬ್ಬರು ಇಡೀ ಘಟನೆಯನ್ನು ಮೂಕವಿಸ್ಮಿತರಾಗಿ ನೋಡುತ್ತಿದ್ದರು. ಇಂತವರ ನಡುವೆ ದೈರ್ಯವಹಿಸಿದ 37 ವರ್ಷದ ಮೊಹಮ್ಮದ್, ತನ್ನ ಪ್ರಾಣವನ್ನು ಲೆಕ್ಕಿಸದೆ ಎದ್ದೇಳಲು ಹೆಣಗಾಡುತ್ತಿದ್ದ ಹುಡುಗಿಯ ಕಡೆಗೆ ಓಡಿದರು.
ರಾಜ್ಯದ ಹಿಜಾಬ್ ವಿವಾದದಲ್ಲಿ ಕಾಣದ ಕೈಗಳ ಕೈವಾಡ..? ಪಾಕ್ನಿಂದಲೂ ವಿವಾದದ ಕಿಡಿ ಹೊತ್ತಿಸಲು ಯತ್ನ
ಆದರೆ ರೈಲು ಅದಾಗಲೇ ತೀರಾ ಹತ್ತಿರವಾಗಿತ್ತು, ಆದರೂ ಅವಳನ್ನು ಉಳಿಸಲು ಸ್ವಲ್ಪ ಸಮಯವಿದೆ ಎಂದು ಮೊಹಮ್ಮದ್ ಅರಿತುಕೊಂಡರು. ಚಲಿಸುವ ರೈಲಿನಡಿಯಲ್ಲೆ ಅವಳ ಕಡೆಗೆ ತೆವಳುತ್ತಾ ಹೋಗಿ ಹುಡುಗಿಯನ್ನು ಟ್ರ್ಯಾಕ್-ಬೆಡ್ ಮಧ್ಯಕ್ಕೆ ಎಳೆದುಕೊಂಡರು. ಹುಡುಗಿಯ ಸುರಕ್ಷತೆಯನ್ನು ಖಾತ್ರಿಪಡಿಸುವ ಸಲುವಾಗಿ, ಜಾಗರೂಕ ಮೊಹಮ್ಮದ್ ಅವಳ ತಲೆಯನ್ನು ಕೆಳಗೆ ಇಟ್ಟುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಸ್ಥಳೀಯರು ಮೊಹಮ್ಮದ್ ಅವರ ಸಾಹಸವನ್ನು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಧ್ಯ, ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಮೊಹಮ್ಮದ್ ಮೆಹಬೂಬ್ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.