ಗುರುವಾರ ರಾಜ್ಯಸಭೆಯಲ್ಲಿ ನಿರುದ್ಯೋಗ ಮತ್ತು ಕೇಂದ್ರ ಬಜೆಟ್ ಬಗ್ಗೆ ಚರ್ಚೆ ನಡೆಯುತ್ತಿತ್ತು ಈ ಸಂದರ್ಭದಲ್ಲಿ ಬಿಜೆಪಿ ಸಂಸದ ಕೆ.ಜೆ. ಅಲ್ಫೋನ್ಸ್, ದೇಶದಲ್ಲಿ ಉದ್ಯೋಗ ಸೃಷ್ಟಿಸುತ್ತಿರುವ ಅಂಬಾನಿ ಹಾಗೂ ಅದಾನಿಗಳಂತಹ ಕೈಗಾರಿಕೋದ್ಯಮಿಗಳನ್ನ “ಪೂಜಿಸಬೇಕು’ ಎಂದಿದ್ದಾರೆ. ಅವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನೀವು ನನ್ನನ್ನು ಬಂಡವಾಳಶಾಹಿಗಳ ಪರವಾದ ಮುಖವಾಣಿ ಎಂದು ಆರೋಪಿಸಬಹುದು. ಈ ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದ ಜನರ ಹೆಸರನ್ನು ನಾನು ಹೇಳುವೆ. ಏಕೆಂದರೆ ನೀವುಗಳು ಅವರ ಬಗ್ಗೆ ಮಾತನಾಡುತ್ತಿರುತ್ತೀರಾ. ರಿಲಯನ್ಸ್ ಇರಲಿ, ಅಂಬಾನಿ ಇರಲಿ, ಅದಾನಿ ಇರಲಿ, ಯಾರೇ ಇರಲಿ, ಅವರನ್ನು ಪೂಜಿಸಬೇಕು. ಏಕೆಂದರೆ ಅವರು ಉದ್ಯೋಗಗಳನ್ನು ಒದಗಿಸುತ್ತಿದ್ದಾರೆ. ಅಂಬಾನಿ, ಅದಾನಿ, ಈ ದೇಶದಲ್ಲಿ ಹಣವನ್ನು ಹೂಡಿಕೆ ಮಾಡಿ, ಹಣ ಸಂಪಾದಿಸುವ ಜೊತೆಗೆ ಅವರು ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ. ಅವರನ್ನು ಗೌರವಿಸಬೇಕು ಎಂದಿದ್ದಾರೆ.
ರಾಜ್ಯದ ಹಿಜಾಬ್ ವಿವಾದದಲ್ಲಿ ಕಾಣದ ಕೈಗಳ ಕೈವಾಡ..? ಪಾಕ್ನಿಂದಲೂ ವಿವಾದದ ಕಿಡಿ ಹೊತ್ತಿಸಲು ಯತ್ನ
ಸಂಸದರ ಹೇಳಿಕೆಯನ್ನು ಖಂಡಿಸಿದ ವಿರೋಧ ಪಕ್ಷಗಳು, ಸರಕಾರವು “ಮುಖರಹಿತ” ಹಾಗೂ “ನಿರುದ್ಯೋಗ, ಬೆಳವಣಿಗೆಯ ಬಗ್ಗೆ ಮಾತನಾಡುತ್ತಿದೆ, ಸರಕಾರದ ನೀತಿಗಳು ಆದಾಯದ ಅಸಮಾನತೆಯನ್ನು ಹೆಚ್ಚಿಸುತ್ತಿದೆ ಎಂದು ವಾದಿಸಿವೆ.
ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳಿಗೆ ಉತ್ತರ ಕೊಟ್ಟಿರುವ ಮಾಜಿ ಕೇಂದ್ರ ಸಚಿವ ಅಲ್ಫೋನ್ಸ್, “ಜಾಗತಿಕ ಅಸಮಾನತೆಗಳು ಎಂಬುದು, ಒಂದು ಸತ್ಯ” ಆದರೆ ಅಂಬಾನಿ, ಅದಾನಿ ಮಾತ್ರವಲ್ಲ, ಇಲಾನ್ ಮಸ್ಕ್, ಅಮೆಜಾನ್ ಒಡೆಯ ಜೆಫ್ ಬೆಜೋಸ್, ಲ್ಯಾರಿ ಪೇಜ್ ಅವರ ಆಸ್ತಿಯಲ್ಲೂ ಏರಿಕೆಯಾಗಿದೆ ಎಂದಿದ್ದಾರೆ.