ರಾಜ್ಯದಲ್ಲಿ ಹಿಜಾಬ್ ಗದ್ದಲವು ತಾರಕಕ್ಕೇರಿರುವ ನಡುವೆಯೇ ಪಾಕಿಸ್ತಾನದ ಇಂಟರ್ -ಸರ್ವೀಸಸ್ ಇಂಟೆಲಿಜೆನ್ಸ್ ದೇಶದಲ್ಲಿ ವಿವಾದವನ್ನು ಹೆಚ್ಚಿಸಲು ಯತ್ನಿಸುತ್ತಿದೆ ಎಂಬ ಮಾಹಿತಿ ಆಂತರಿಕ ಮೂಲಗಳಿಂದ ತಿಳಿದುಬಂದಿದೆ.
ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ ಮೂಲಕ ಈ ವಿವಾದಕ್ಕೆ ಇನ್ನಷ್ಟು ತುಪ್ಪ ಸುರಿಯಲು ಪಾಕ್ ಮುಂದಾಗಿದೆ ಎನ್ನಲಾಗಿದೆ.
ಐಎಸ್ಐ ದೇಶದಲ್ಲಿ ಹಿಜಾಬ್ ಜನಾಭಿಪ್ರಾಯ ಸಂಗ್ರಹಣೆಯ ಪರಿಕಲ್ಪನೆಯನ್ನು ಮುಂದಿಡುತ್ತಿದೆ ಎಂಬುದು ತಿಳಿದುಬಂದಿದೆ.
ಭಯೋತ್ಪಾದಕ ಗುಂಪಾದ ಎಸ್ಎಫ್ಜೆ ಮೂಲಕ ಐಎಸ್ಐ ನಡೆಸುತ್ತಿರುವ ಹಿಜಾಬ್ ರೆಫ್ರೆಂಡಮ್ ಮೇಲೆ ಕಣ್ಣಿಡುವಂತೆ ಗುಪ್ತಚರ ಇಲಾಖೆಯು ಪೊಲೀಸ್ ಇಲಾಖೆ ಹಾಗೂ ಕಾನೂನು ಜಾರಿ ಸಂಸ್ಥೆಗಳಿಗೆ ಎಚ್ಚರಿಕೆಯನ್ನು ನೀಡಿದೆ.
ಭಾರತ ವಿರೋಧಿ ಮನಸ್ಥಿತಿಗಳು ಸಿಖ್ಸ್ ಫಾರ್ ಜಸ್ಟೀಸ್ ಗುರುಪತ್ವಾನ್ರ್ ಸಿಂಗ್ ಪನ್ನು ಜೊತೆಯಲ್ಲಿ ಸೇರಿ ಹಿಜಾಬ್ ಜನಾಭಿಪ್ರಾಯ ಸಂಗ್ರಹಣೆಯನ್ನು ಮಾಡುವ ಮೂಲಕ ಉರ್ದುಸ್ತಾನ್ ಎಂಬ ಪರಿಕಲ್ಪನೆಯನ್ನು ವಿಜೃಂಭಿಸಬಹುದು ಎಂದು ಗುಪ್ತಚರ ಇಲಾಖೆಯು ಎಚ್ಚರಿಕೆ ನೀಡಿದೆ.