ಅಫ್ಘನ್ ನೆರೆಹೊರೆಯವರ ನಡುವಿನ ಹೃದಯಸ್ಪರ್ಶಿ ಘಟನೆಯನ್ನು ವಿನಿಮಯ ಮಾಡಿಕೊಂಡ ಯುಕೆ ಮಹಿಳೆ 12-02-2022 8:40AM IST / No Comments / Posted In: Latest News, Live News, International ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸುತ್ತಿದ್ದಂತೆ, ಅಲ್ಲಿದ್ದ ಜನರು ಪಲಾಯನ ಮಾಡಿದ್ದರು. ಇದು ವಿಶ್ವದಾದ್ಯಂತ ಭಾರಿ ಸುದ್ದಿ ಮಾಡಿರುವುದು ನಿಮಗೆ ಗೊತ್ತೇ ಇದೆ. ಇದೀಗ ಬ್ರಿಟನ್, ಮಹಿಳೆಯು ತನ್ನ ನೆರೆಹೊರೆಯ ಅಫ್ಘನ್ ಕುಟುಂಬದ ಬಗೆಗಿನ ಹೃದಯಸ್ಪರ್ಶಿ ಘಟನೆಯನ್ನು ವಿನಿಮಯ ಮಾಡಿದ್ದಾರೆ. ಯುಕೆ ಮೂಲದ ಮಹಿಳೆ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರು. ಇದನ್ನು ತಿಳಿದ ನೆರೆಹೊರೆಯ ಅಫ್ಘನ್ ಕುಟುಂಬ ಆಕೆಗಾಗಿ ಮನೆಯಲ್ಲಿ ತಯಾರಿಸಿದ ಆಹಾರವನ್ನು ಕಳುಹಿಸಿಕೊಟ್ಟು ಔರ್ದಾರ್ಯತೆ ಮೆರೆದಿದ್ದಾರೆ. ಬ್ಲೇಕ್ ಎಂಬಾಕೆ ತನ್ನ ನೆರೆಹೊರೆಯವರಿಗೆ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿದ್ದಾಳೆ. ಶೀಘ್ರದಲ್ಲೇ ಅವರು ಆಕೆಗಾಗಿ ಮನೆಯಲ್ಲಿ ತಯಾರಿಸಿದ ಊಟವನ್ನು ತಂದು ಕೊಟ್ಟಿದ್ದಾರೆ. ಮೊಸರು, ಬ್ರೆಡ್, ಬೆಂಡೆಕಾಯಿ, ಪಾಲಕ್ ಒಳಗೊಂಡಿರುವ ಊಟವನ್ನು ಬ್ಲೇಕ್ ಗೆ ಅಫ್ಘನ್ ಕುಟುಂಬ ಕಳುಹಿಸಿಕೊಟ್ಟಿದೆ. ಈ ಚಿತ್ರಣವನ್ನು ಬ್ಲೇಕ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ಟ್ವಿಟ್ಟರ್ನಲ್ಲಿ 56,000 ಕ್ಕೂ ಹೆಚ್ಚು ಲೈಕ್ಗಳು ಮತ್ತು ನೂರಾರು ಕಾಮೆಂಟ್ಗಳೊಂದಿಗೆ ವೈರಲ್ ಆಗಿದೆ. ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ನಲ್ಲಿ ನೆರೆಹೊರೆಯ ಅಫ್ಘಾನ್ ನಿವಾಸಿಗೆ ಸಾಕಷ್ಟು ಪ್ರಶಂಸೆ ಮತ್ತು ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. One of my neighbours is afghan. He fled a few weeks ago, leaving his entire family. He asked in broken English last week why I looked skinny (ESL – forgave him 😂). I said id recently had surgery & was ill. He just dropped this around. All homemade, including the yoghurt & bread. pic.twitter.com/Lh3ePFKi4x — Sunday Blake (@SundayMargot) February 2, 2022