ಪೆಟ್ರೋಲ್ ಬೆಲೆ ದುಬಾರಿ ಆಗಿರುವ ಹೊತ್ತಿನಲ್ಲಿ ಜನಸಾಮಾನ್ಯರು ಪರ್ಯಾಯ ಮಾರ್ಗವಾಗಿ ಎಲೆಕ್ಟ್ರಿಕ್ ಚಾಲಿತ ಸ್ಕೂಟರ್, ಬೈಕ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಲೇ ಹೋಗುತ್ತಿದೆ. ಕಾರು ತಯಾರಿಕೆ ಕಂಪನಿಗಳು ಕೂಡ ತಮ್ಮ ಒಂದು ಮಾಡೆಲ್ ಕಾರನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಿ ಮಾರುಕಟ್ಟೆಗೆ ಬಿಟ್ಟಿವೆ. ಸ್ಕೂಟರ್‌ಗಳಂತೂ ಲೆಕ್ಕವೇ ಇಲ್ಲ, ಅಷ್ಟು ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಇದಕ್ಕೆ ಹೊಸ ಸೇರ್ಪಡೆ ಎಂದರೆ ಎಲೆಕ್ಟ್ರಿಕ್ ಬೈಕ್‌ಗಳು. ಕಾಲೇಜು ಹುಡುಗರ ನೆಚ್ಚಿನ ಬೈಕ್‌ಗಳು ಕೂಡ ಎಲೆಕ್ಟ್ರಿಕ್ ಆಗುವತ್ತ ಹೆಜ್ಜೆ ಇಟ್ಟಿವೆ. ಇದರ ಮೊದಲ ಭಾಗವಾಗಿ ಪಡ್ಡೆಹೈಕಳ ನೆಚ್ಚಿನ ರೇಸಿಂಗ್ ಬೈಕ್, ಸ್ಪೋರ್ಟ್ಸ್ ಬೈಕ್ ಖ್ಯಾತಿಯ ’ಕೆಟಿಎಂ ಡ್ಯೂಕ್’ನ ಎಲೆಕ್ಟ್ರಿಕ್ ಚಾಲಿತ ಆವೃತ್ತಿ ಶೀಘ್ರವೇ ಶೋರೂಮ್‌ಗಳಲ್ಲಿ ಲಭ್ಯವಾಗಲಿದೆ. ಇದಕ್ಕೆ ರೂಪುರೇಷೆ ಸಿದ್ಧಪಡಿಸುತ್ತಿರುವುದು ಕೆಟಿಎಂ ಕಂಪನಿಯ ಅಂಗಸಂಸ್ಥೆಯಾದ ’ಹುಸ್ಕ್‌ವರ್ಣಾ’. ಈ ಕಂಪನಿಯು ತನ್ನ ಹೊಸ ಎಲೆಕ್ಟ್ರಿಕ್ ಮೋಟಾರ್‌ಬೈಕ್‌ಗೆ ’ಇ-ಪೈಲೆನ್’ ಎಂದು ಹೆಸರಿಟ್ಟಿದೆ. ಇದಕ್ಕೆ ಇ-ಡ್ಯೂಕ್ ಎಂಬ ಮರುನಾಮಕರಣಕ್ಕೆ ಸಿದ್ಧತೆ ನಡೆಯುತ್ತಿದೆ.
ನೆಚ್ಚಿನ ನಟನ ಹೆಸರನ್ನು ಬಿಚ್ಚಿಟ್ಟ ದೀಪಿಕಾ ಪಡುಕೋಣೆ….!
ಗಂಟೆಗೆ 5.5 ಕಿಲೋ ವ್ಯಾಟ್ ಉತ್ಪಾದಿಸುವ ಸಾಮರ್ಥ್ಯದ ಬ್ಯಾಟರಿಯಿಂದ 10 ಕಿ.ವ್ಯಾಟ್ ಶಕ್ತಿ ಪಡೆದು ಬೈಕ್ ಚಲಿಸಲಿದೆ. ಪೆಟ್ರೋಲ್ ಚಾಲಿತ ಕೆಟಿಎಂ ಡ್ಯೂಕ್ 125 ಸಿಸಿ ಬೈಕ್‌ನ ವೇಗಕ್ಕೆ ಸಮನಾಗಿ ಇ-ಡ್ಯೂಕ್ ಇರಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ಕಂಪನಿ ಕಡೆಯಿಂದ ಇ-ಡ್ಯೂಕ್‌ನ ಬೆಲೆಯ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಅದರೆ, ಸ್ವಿಡನ್ ಮೂಲದ ಕಂಪನಿಯು ಭಾರತೀಯ ಮಾರುಕಟ್ಟೆಗೆ ಹೊರೆಯಾಗದಂತೆ ಇ-ಡ್ಯೂಕ್ ರಸ್ತೆಗಿಳಿಸುವುದು ಮಾತ್ರ ಪಕ್ಕಾ ಆಗಿದೆ.