ಮದುವೆ ದಿನದಂದು ಕಲ್ಯಾಣಮಂಟಪಕ್ಕಿಂತ ಮೊದಲು ಮತಗಟ್ಟೆಗೆ ತೆರಳಿ ಮಾದರಿಯಾದ ವರ….! 10-02-2022 6:34PM IST / No Comments / Posted In: Latest News, India, Live News ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. ಮುಜಾಫರ್ ನಗರದಲ್ಲಿ ಮತದಾರರೊಬ್ಬರು ವರನ ಧಿರಿಸಿನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳುವ ಬದಲು ನೇರವಾಗಿ ಮತದಾನಕ್ಕೆ ಆಗಮಿಸುವ ಮೂಲಕ ಪ್ರಜ್ಞಾವಂತ ನಾಗರೀಕರೆನಿಸಿದ್ದಾರೆ. ಅಂಕುರ್ ಬಾಲ್ಯನ್ರ ಮದುವೆ ಮತದಾನದ ದಿನವೇ ನಿಗದಿಯಾಗಿತ್ತು. ಆದರೆ ಮದುವೆ ಕಾರ್ಯಕ್ರಮಕ್ಕೆಂದು ಮತದಾನವನ್ನು ತಪ್ಪಿಸಬಾರದೆಂದು ವರ ಅಂಕುರ್ ಮೊದಲು ಮತಗಟ್ಟೆಗೆ ತೆರಳಿ ಮತವನ್ನು ಚಲಾಯಿಸಿ ಬಳಿಕ ಕಲ್ಯಾಣ ಮಂಟಪಕ್ಕೆ ತೆರಳಿದ್ದಾರೆ. ಇನ್ನು ಮತಗಟ್ಟೆಯಲ್ಲಿ ಈ ವಿಚಾರವಾಗಿ ಮಾತನಾಡಿದ ವರ ಅಂಕುರ್ ಬಾಲ್ಯನ್, ಮೊದಲು ಮತದಾನ, ಬಳಿಕ ಪತ್ನಿ, ಇದಾದ ಬಳಿಕ ಮಿಕ್ಕ ಕೆಲಸ ಎಂದು ಮಾಧ್ಯಮಗಳ ಎದುರು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮೊದಲ ಹಂತದ ಮತದಾನ ಆರಂಭಗೊಂಡಿದೆ. ಇದು ಸಂಜೆ 6 ಗಂಟೆಯವರೆಗೂ ನಡೆಯಲಿದೆ. ಚುನಾವಣಾ ಆಯೋಗವು ನೀಡಿರುವ ಮಾಹಿತಿಯ ಪ್ರಕಾರ ಉತ್ತರ ಪ್ರದೇಶದಲ್ಲಿ ಬೆಳಗ್ಗೆ 11 ಗಂಟೆವರೆಗೆ 20.3 ಪ್ರತಿಶತ ಮತದಾನವಾಗಿತ್ತು. #WATCH | "Pehle matdaan, uske baad bahu, uske baad sab kaam," says Ankur Balyan, a bridegroom who had come to cast his vote at a polling booth in Muzaffarnagar ahead of his wedding today.#UttarPradeshElections2022 pic.twitter.com/KaYsv5s2Bb — ANI UP/Uttarakhand (@ANINewsUP) February 10, 2022 #WATCH | "Pehle matdaan, uske baad bahu, uske baad sab kaam," says Ankur Balyan, a bridegroom who had come to cast his vote at a polling booth in Muzaffarnagar ahead of his wedding today.#UttarPradeshElections2022 pic.twitter.com/KaYsv5s2Bb — ANI UP/Uttarakhand (@ANINewsUP) February 10, 2022