ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಕುರಿತು ಪಾಕಿಸ್ತಾನಿ ಸಾಮಾಜಿಕ ಕಾರ್ಯಕರ್ತೆ ಮಲಾಲಾ ಟ್ವೀಟ್ ಮಾಡಿದ್ದಾರೆ. ಆದರೆ ಮಲಾಲಾ ಪ್ರತಿಕ್ರಿಯೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಬಿಜೆಪಿ ಸದಸ್ಯರಾದ ಕಪಿಲ್ ಮಿಶ್ರಾ ಮತ್ತು ಮಂಜಿಂದರ್ ಸಿಂಗ್ ಸಿರ್ಸಾ ಅವರು ಟ್ವೀಟ್ ಮೂಲಕ ಮಲಾಲಾಗೆ ನಿಜವಾದ ಸಮಸ್ಯೆಗಳು ಕಾಣಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಿಜಾಬ್ ಧರಿಸದ ಕಾರಣಕ್ಕೆ ಅಫ್ಘಾನಿಸ್ತಾನ, ಇರಾನ್, ಪಾಕಿಸ್ತಾನದಲ್ಲಿ ಮುಸ್ಲಿಂ ಹುಡುಗಿಯರು ಕೊಲ್ಲಲ್ಪಡುತ್ತಿದ್ದಾರೆ. ಕೇವಲ ಹಿಂದೂ ಎಂಬ ಕಾರಣಕ್ಕೆ ಪಾಕಿಸ್ತಾನದಲ್ಲಿ ಹಿಂದೂ, ಸಿಖ್ ಹುಡುಗಿಯರನ್ನು ಕೊಲ್ಲಲಾಗುತ್ತಿದೆ. ಆದರೆ ಮಲಾಲಾ ಎಂದಿಗೂ ನಿಜವಾದ ಸಮಸ್ಯೆಗಳ ಬಗ್ಗೆ ಒಂದೇ ಒಂದು ಪದವನ್ನು ಹೇಳಿಲ್ಲ. ಇತರರಂತೆ ಮಲಾಲಾ ಸಹ ಮೂಲಭೂತವಾದಿ ಇಸ್ಲಾಮಿಕ್ ಜಿಹಾದಿ ಅಜೆಂಡಾವನ್ನು ನಡೆಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ತಿರುಗೇಟು ನೀಡಿದ್ದಾರೆ.
ಬರೋಬ್ಬರಿ 450 ಕೆ.ಜಿ. ತೂಕದ ಮೀನನ್ನು ಹಿಡಿದ ಮಹಿಳೆ: ಭೇಷ್ ಎಂದ ನೆಟ್ಟಿಗರು
ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ, ಸಿಖ್ ಬಾಲಕಿಯರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಇಂತಹ ಮಹತ್ವದ ವಿಷಯಗಳ ಬಗ್ಗೆ ಮಲಾಲಾ ಎಂದಿಗೂ ಮಾತನಾಡಿಲ್ಲ. ಆದರೆ ಇಂದು ಅವರು ಸತ್ಯವನ್ನು ಪರಿಶೀಲಿಸದೆ ಟ್ವೀಟ್ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ, ಪಾಕಿಸ್ತಾನಿ ಆ್ಯಕ್ಟಿವಿಸ್ಟ್ ಮಲಾಲಾ ಯೂಸುಫ್‌ಜಾಯಿ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಕುರಿತು ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹಿಜಾಬ್ ಧರಿಸಿ ಹೆಣ್ಣುಮಕ್ಕಳು ಶಾಲೆಗೆ ಹೋಗಲು ನಿರಾಕರಿಸುವುದು ಭಯಾನಕ ಬೆಳವಣಿಗೆ. ಕಡಿಮೆ ಧರಿಸಿದರು ಕಷ್ಟ, ಹೆಚ್ಚು ಧರಿಸಿದರು ಕಷ್ಟ. ಮಹಿಳೆಯರ ಆಬ್ಜೆಕ್ಟಿಫಿಕೇಶನ್ ಮುಂದುವರಿಯುತ್ತಲೆ ಇದೆ. ಭಾರತೀಯ ನಾಯಕರು ಮುಸ್ಲಿಂ ಮಹಿಳೆಯರನ್ನು ಕಡೆಗಣಿಸುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.