ವರದಕ್ಷಿಣೆ ಕಿರುಕುಳ ಹಾಗೂ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಜೈಲುಪಾಲಾಗಿರುವ ವ್ಯಕ್ತಿಯೊಬ್ಬ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಜಾಮೀನು ಅರ್ಜಿಗಾಗಿ ಆರೋಪಿ ಪರವಾಗಿ ವಾದ ಮಂಡಿಸಿದ ವಕೀಲರು ಈ ವ್ಯಕ್ತಿಯು ಇಂತಹ ಯಾವುದೇ ಪೂರ್ವಾಪರ ಆರೋಪಗಳನ್ನು ಮಾಡಿಲ್ಲ ಎಂದು ವಾದಿಸಿದರು. ಇದಕ್ಕೆ ಮರುಪ್ರಶ್ನೆ ಮಾಡಿದ ಸುಪ್ರೀಂ ಕೋರ್ಟ್., ನಿಮ್ಮ ಮಾತಿನ ಅರ್ಥವೇನು..? ಪೂರ್ವಾಪರ ಅಂದರೇನು..? ಆರೋಪಿಯು ಪ್ರತಿ ವರ್ಷ ಯಾರನ್ನಾದರೂ ಮದುವೆಯಾಗಿ ಬಳಿಕ ಅವರನ್ನು ಕೊಲ್ಲುವುದನ್ನು ಪೂರ್ವಾಪರ ಎನ್ನುತ್ತೀರಾ ಎಂದು ಟಾಂಗ್ ನೀಡಿದೆ.
ಈ ಹಂತದಲ್ಲಿ ಜಾಮೀನು ನೀಡಲು ಸಾಧ್ಯವೇ ಇಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ಪ್ರಕರಣ ಸಂಬಂಧ ವಿಚಾರಣೆ ಆರಂಭಿಸುವಂತೆ ಸೂಚನೆ ನೀಡಿದೆ.