ಪಿಎಂ ಕಿಸಾನ್ ಸಮ್ಮಾನ್ ನಿಧಿಯ 10ನೇ ಕಂತು ಜನವರಿ ಒಂದರಂದು ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಮುಂದಿನ ಕಂತಿಗಾಗಿ ಕಾಯುತ್ತಿರುವ 12 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ ಮಹತ್ವದ ಸುದ್ದಿಯಿದೆ. ಇನ್ನೂ ಇ-ಕೆವೈಸಿ ಮಾಡದಿದ್ದರೆ, 11ನೇ ಕಂತಿನ ಹಣ ಖಾತೆ ಸೇರುವುದಿಲ್ಲವೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಮೋದಿ ಸರ್ಕಾರ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಣಿಯಾದ ರೈತರು ಆಧಾರ್ ಇ-ಕೆವೈಸಿ ಮಾಡಿಸಬೇಕು. ಆಧಾರ್ ಆಧಾರಿತ ಒಟಿಪಿ ದೃಢೀಕರಣಕ್ಕಾಗಿ ರೈತರು ಕಿಸಾನ್ ಕಾರ್ನರ್ನಲ್ಲಿ ಇ-ಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹತ್ತಿರದ ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡಬೇಕು. ಮೊಬೈಲ್, ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ನಿಂದಲೂ ಮನೆಯಲ್ಲೇ ಕುಳಿತು ಈ ಕೆಲಸ ಮಾಡಬಹುದು.
ಆನ್ಲೈನ್ ನಲ್ಲಿ ಕೆವೈಸಿ ಮಾಡಲು ಮೊದಲು https://pmkisan.gov.in/ ಪೋರ್ಟಲ್ಗೆ ಹೋಗಬೇಕು. ಬಲಭಾಗದಲ್ಲಿ ಮೇಲೆ eKYC ಬರೆದಿರುವುದನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಬೇಕು. ಈಗ ನಿಮ್ಮ ಆಧಾರ್ ಸಂಖ್ಯೆ ಮತ್ತು ಇಮೇಜ್ ಕೋಡ್ ನಮೂದಿಸಬೇಕು. ಸರ್ಚ್ ಬಟನ್ ಕ್ಲಿಕ್ ಮಾಡಬೇಕು.
ಆಧಾರ್ನೊಂದಿಗೆ ಲಿಂಕ್ ಆದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಹಾಕಬೇಕಾಗುತ್ತದೆ. ನೀವು ಇದೆಲ್ಲವನ್ನೂ ಸರಿಯಾಗಿ ಮಾಡಿದ್ದರೆ ನಿಮ್ಮ ಇ-ಕೆವೈಸಿ ಪೂರ್ಣಗೊಳ್ಳುತ್ತದೆ. ಇಲ್ಲವಾದ್ರೆ ಸರಿಯಾಗಿಲ್ಲವೆಂದು ಅಲ್ಲಿಯೇ ಬರುತ್ತದೆ. ಒಂದು ವೇಳೆ ಅಮಾನ್ಯವೆಂದು ಬಂದಲ್ಲಿ ನೀವು ಕೇಂದ್ರಕ್ಕೆ ಹೋಗಬೇಕಾಗುತ್ತದೆ.