ಭಾರತೀಯ ಗಾನ ಕೋಗಿಲೆ, ಲತಾ ಮಂಗೇಶ್ಕರ್ ಪ್ರಪಂಚದಾದ್ಯಂತ ಸಂಗೀತ ಪ್ರೇಮಿಗಳನ್ನು ಶೋಕದಲ್ಲಿ ಮುಳುಗಿಸಿ ಪಂಚಭೂತಗಳಲ್ಲಿ ಲೀನವಾದರು. ಆದರೆ ಅವರು ಬಿಟ್ಟು ಹೋದ ನೆನಪುಗಳು ಅವಿಸ್ಮರಣೀಯ. ಲತಾ ಮಂಗೇಶ್ಕರ್ ಅವರ ಮಾತೃಭಾಷೆ ಮರಾಠಿ ಆಗಿದ್ದರೂ, ಅವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಭಾಷೆಗಳಲ್ಲಿ ಹಾಡಿದ್ದಾರೆ. ಆದರೆ ಅವರು ಗುಜರಾತಿಯಲ್ಲಿ ಪತ್ರ ಬರೆದಿದ್ದರು ಎಂದು ಈಗ ತಿಳಿದುಬಂದಿದೆ.
ಅವರು ಗುಜರಾತಿಯಲ್ಲಿ ಪತ್ರ ಬರೆದದ್ದು, ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರಿಗೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಲತಾ ದೀದಿ ನಡುವೆ ಸಾಕಷ್ಟು ಆತ್ಮೀಯತೆ ಇದೆ. ಜೂನ್ 5, 2019 ರಂದು, ನರೇಂದ್ರ ಮೋದಿ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದು ಸತತ ಎರಡನೇ ಬಾರಿಗೆ ಪ್ರಧಾನಿಯಾದಾಗ, ಮಂಗೇಶ್ಕರ್ ಅವರು ಹೀರಾಬೆನ್ ಅವರಿಗೆ ಪತ್ರ ಬರೆದರು.
ಆರು ವರ್ಷದಿಂದ ಪತಿ ಆಹಾರದಲ್ಲಿ ಮಾದಕವಸ್ತು ಬೆರೆಸುತ್ತಿದ್ದ ಪತ್ನಿ ಅಂದರ್…!
ನಿಮ್ಮ ಪಾದಗಳಿಗೆ ನನ್ನ ಗೌರವಪೂರ್ವಕ ನಮನಗಳು, ಭಗವಾನ್ ಶ್ರೀರಾಮನ ಕೃಪೆಯಿಂದ ಮತ್ತೊಮ್ಮೆ ಪ್ರಧಾನಿಯಾಗಿರುವ ನಿಮ್ಮ ಮಗ, ನನ್ನ ಸಹೋದರ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಸರಳ ಜೀವನ ನಡೆಸುತ್ತಿರುವ ನರೇಂದ್ರ ಭಾಯಿಯವರಿಗೆ ನನ್ನ ಅಭಿನಂದನೆಗಳು. ಪ್ರಹ್ಲಾದ್ ಭಾಯಿ, ಪಂಕಜ್ ಭಾಯಿ ಮತ್ತು ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗೆ ಹೃತ್ಪೂರ್ವಕ ಶುಭಾಶಯಗಳು. ನೀವು ಮತ್ತು ನಿಮ್ಮ ಕುಟುಂಬ ಸುರಕ್ಷಿತ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ನಾನು ಗುಜರಾತಿ ಭಾಷೆಯಲ್ಲಿ ಮೊದಲ ಬಾರಿಗೆ ಪತ್ರ ಬರೆಯುತ್ತಿದ್ದೇನೆ, ತಪ್ಪಾಗಿದ್ದರೆ ಕ್ಷಮಿಸಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ ತಾಯಿ ಎಂದು ಲತಾ ಮಂಗೇಶ್ಕರ್ ಪತ್ರ ಬರೆದಿದ್ದರು.
ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನದ ನಂತರ ಗುಜರಾತ್ ರಾಜ್ಯ ಬಿಜೆಪಿ ಶಾಖೆ ಈ ಪತ್ರವನ್ನು ಹಂಚಿಕೊಂಡಿದೆ. ಈ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.