ದೇಶದಲ್ಲೇ ಮೊದಲ ಬಾರಿಯ ರೆಸ್ಟೋರೆಂಟ್ ಕಾನ್ಸೆಪ್ಟ್ ಒಂದಕ್ಕೆ ನಾಗ್ಪುರ ರೈಲ್ವೇ ನಿಲ್ದಾಣದಲ್ಲಿ ಕರಿದ ಖಾದ್ಯಗಳ ಖ್ಯಾತನಾಮ ಬ್ರಾಂಡ್ ಹಲ್ದಿರಾಮ್ಸ್ ಚಾಲನೆ ಕೊಟ್ಟಿದೆ.
ಕೇಂದ್ರ ರೈಲ್ವೇ ವಲಯದಲ್ಲಿ ಬರುವ ಈ ಐತಿಹಾಸಿಕ ನಿಲ್ದಾಣದ ಆವರಣದಲ್ಲಿರುವ ಹಳೆಯ ಕೋಚ್ ಒಂದನ್ನು ರೆಸ್ಟೋರೆಂಟ್ ಆಗಿ ಮಾರ್ಪಾಡು ಮಾಡಿದೆ ಹಲ್ದಿರಾಮ್ಸ್. ಈ ಹೊಸ ಕಾನ್ಸೆಪ್ಟ್ ಸಾಮಾಜಿಕ ಜಾಲತಾಣದಲ್ಲೆಲ್ಲಾ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಮಹಿಳೆ ಚಿನ್ನ ಅಡಗಿಸಿಟ್ಟುಕೊಂಡಿದ್ದೆಲ್ಲಿ ಅಂತ ತಿಳಿದ್ರೆ ಶಾಕ್ ಆಗ್ತೀರಾ…!
ಈ ಕುರಿತು ಮಾತನಾಡಿದ ವಿಭಾಗೀಯ ರೈಲ್ವೇ ನಿರ್ವಾಹಕಿ ರಿಚಾ ಖಾರೇ, “ಕೋಚ್ ಅನ್ನು ರೆಸ್ಟೋರೆಂಟ್ ಆಗಿ ಅಭಿವೃದ್ಧಿಪಡಿಸಲು ನಾವು ಟೆಂಡರ್ ಆಹ್ವಾನಿಸಿದ್ದೆವು. ಈ ಕೋಚ್ ಅನ್ನು ಹಲ್ದಿರಾಮ್ಸ್ ಕಾರ್ಯಾಚರಿಸುತ್ತಿದೆ. ಜನರಿಗೆ ಇದು ಇಷ್ಟವಾಗಲಿದೆ ಎಂದು ಭಾವಿಸುತ್ತೇವೆ. ಇದಕ್ಕೆ ಒಳ್ಳೆ ಪ್ರತಿಕ್ರಿಯೆ ಬಂದಲ್ಲಿ ಬೇರೆ ಜಿಲ್ಲೆಗಳಲ್ಲೂ ಇಂಥ ರೆಸ್ಟೋರೆಂಟ್ ತೆರೆಯುವ ಆಲೋಚನೆ ನಮ್ಮದು,” ಎಂದಿದ್ದಾರೆ.
“ದರ-ರಹಿತವಾದ ಆದಾಯದ ಕಾನ್ಸೆಪ್ಟ್ ಇದಾಗಲಿದ್ದು, ಇಲಾಖೆಯ ಆಸ್ತಿಗಳ ಸದುಪಯೋಗ ಮಾಡಿಕೊಂಡು ಆದಾಯದ ಮೂಲಗಳನ್ನಾಗಿ ಪರಿವರ್ತಿಸುವ ಐಡಿಯಾ ಇದಾಗಿದೆ. ಹೀಗಾಗಿ ಕೋಚ್ ಒಂದನ್ನು ಈ ವಿಶಿಷ್ಟ ರೆಸ್ಟೋರೆಂಟ್ ಆಗಿ ಅಭಿವೃದ್ಧಿ ಮಾಡಿದ್ದೇವೆ,” ಎಂದಿದ್ದಾರೆ ಖಾರೇ.
ಈ ಹೊಸ ಕಾನ್ಸೆಪ್ಟ್ ಗ್ರಾಹಕರಿಗೆ ಇಷ್ಟವಾಗಿದೆ. “ನಮಗೆ ಇದು ಇಷ್ಟವಾಗಿದೆ. ಮಹಾರಾಜಾ ಎಕ್ಸ್‌ಪ್ರೆಸ್‌ನಲ್ಲಿ ಕುಳಿತು ಊಟ ಮಾಡುತ್ತಿರುವ ಭಾವವನ್ನು ಇದು ನಮಗೆ ಕೊಡುತ್ತಿದೆ,” ಎಂದು ಸುನೀಲ್ ಅಗರ್ವಾಲ್ ಹೆಸರಿನ ಗ್ರಾಹಕರೊಬ್ಬರು ಹೇಳುತ್ತಾರೆ.
“ಇದೊಂದು ಸುಂದರ ಕಲ್ಪನೆ. ಆಹಾರ-ಪೇಯಗಳೆಲ್ಲಾ ಇಲ್ಲಿ ದೊರಕುತ್ತವೆ. 3-5 ಸ್ಟಾರ್ ರೆಸ್ಟೋರೆಂಟ್‌ನಂತೆ ಇದು ಭಾಸವಾಗುತ್ತದೆ. ಇಲ್ಲಿಗೆ ಬರುತ್ತಲೇ ನನಗೆ ಭಾರೀ ಖುಷಿಯಾಗುತ್ತಿದೆ,” ಎನ್ನುತ್ತಾರೆ ರಿಜ಼್ವಾನ್ ಖಾನ್ ಹೆಸರಿನ ಮತ್ತೊಬ್ಬ ಗ್ರಾಹಕ.