ಮೈಸೂರು: ಶಾಲಾ-ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ವಿಚಾರವಾಗಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಮವಸ್ತ್ರ ಎಂಬುದು ಕೇವಲ ಬಣ್ಣದ ಉಡುಪಲ್ಲ, ಎಲ್ಲಾ ಮಕ್ಕಳು ಸಮಾನರು ಎಂದು ಸಾರುವ ಉಡುಪು ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಕ್ಕೆ ಸರ್ಕಾರ ಬದ್ಧವಾಗಿದೆ. ಸಮಾನತೆಯ ಪ್ರತೀಕವಾದ ಸಮವಸ್ತ್ರ ಜಾರಿಮಾಡುವುದು ಒಳ್ಳೆಯದು ಎಂದರು.
ಉಳಿತಾಯ ಮಾಡಿದ 40 ಲಕ್ಷ ರೂ. ಗಳನ್ನು ಬಡ ಮಕ್ಕಳಿಗೆ ನೀಡಿದ ಶಾಲಾ ಶಿಕ್ಷಕ
ಹಿಜಾಬ್ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಚಾಮರಾಜಪೇಟೆಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅಲ್ಲಿಂದಲೇ ಸ್ಪರ್ಧಿಸುವಂತೆ ಜಮೀರ್ ಆಹ್ವಾನ ನೀಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಹೆಸರು ಬದಲಿಸಿಕೊಳ್ಳಲಿದ್ದಾರೆ. ‘ಸಿದ್ದ ರಹೀಮಯ್ಯ’ ಅಂತಾ ಹೆಸರು ಬದಲಿಸಿಕೊಳ್ತಾರೆ. ಅದಕ್ಕಾಗಿ ಹಿಜಾಬ್ ಪರವಾಗಿ ಮಾತನಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.