ದೆಹಲಿಯ ಉತ್ತಮ್ ನಗರದಲ್ಲಿರುವ ಫುಡ್ ಜಾಯಿಂಟ್ ಒಂದು ಆಹಾರ ಪ್ರಿಯರಿಗೆ ಹೊಸ ಸವಾಲೊಂದನ್ನು ಪರಿಚಯಿಸಿದೆ. ತಾನು ತಯಾರಿಸುವ 10 ಅಡಿ ಉದ್ದದ ಮಸಾಲೆ ದೋಸೆಯನ್ನು ಒಬ್ಬರೇ ತಿಂದು ಮುಗಿಸುವವರಿಗೆ 71,000 ರೂ.ಗಳನ್ನು ಬಹುಮಾನವಾಗಿ ನೀಡುತ್ತಿದೆ.
ಬ್ಲಾಗರ್ ಭಾವನಾ ಈ ಹೊಸ ಚಾಲೆಂಜ್ ಅನ್ನು ಪರಿಚಯಿಸಿದ ಸ್ವಾಮಿ ಶಕ್ತಿ ಸಾಗರ್‌ರನ್ನು ಭೇಟಿ ಮಾಡಿರುವ ವಿಡಿಯೋದಲ್ಲಿ 10 ಅಡಿ ಉದ್ದದ ದೋಸೆಯನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ತೋರಿಸಿದ್ದಾರೆ. ಆನ್ಲೈನ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋ ಐದು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಕೋವಿಡ್ ಪ್ರೋಟೋಕಾಲ್ ಕಟ್ಟುನಿಟ್ಟಿನ ಪಾಲನೆ: ಸೇವೆಗೆ ರೋಬೋಟ್ ನಿಯೋಜನೆ
10 ಅಡಿ ಉದ್ದದ ದೋಸೆ ಮತ್ತು ಚಾಲೆಂಜ್‌ನ ಭಾಗವಾಗಿ ಮುಗಿಸಬೇಕಾದ ಮಸಾಲೆಗಳನ್ನು ಬಾಣಸಿಗ ಹೇಗೆ ತಯಾರಿಸಿದ್ದಾರೆ ಎಂಬುದನ್ನು ವೈರಲ್ ವಿಡಿಯೊ ತೋರಿಸುತ್ತದೆ. ಈ ಕಾಂಬೋ ದೋಸೆಯೊಂದಿಗೆ ಸಾಂಬಾರ್, ಚಟ್ನಿ ಮತ್ತು ಆಲೂಗಡ್ಡೆಯ ಫಿಲ್ಲಿಂಗ್ ಒಳಗೊಂಡಿದೆ.
ವಿಡಿಯೊವನ್ನು ಇಲ್ಲಿ ವೀಕ್ಷಿಸಿ:
ನೆಟಿಜನ್‌ಗಳು ಈ ಸವಾಲನ್ನು ಇಷ್ಟಪಟ್ಟಿದ್ದು, ಕಾಮೆಂಟ್ ಸೆಕ್ಷನ್‌ನಲ್ಲಿ ತಾವೂ ಸಹ ಈ ದೋಸೆಯನ್ನು ಪೂರ್ಣವಾಗಿ ತಿನ್ನಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದಾರೆ.
https://www.youtube.com/watch?v=QNOUkQK50jA&feature=youtu.be