ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ನಿಗೂಢ ಸಮುದ್ರ ಜೀವಿಯೊಂದು ಮೀನುಗಾರರಿದ್ದ ದೋಣಿಯನ್ನು ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ನೋಡಬಹುದು.
ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್‌ನ ಕರಾವಳಿಯಲ್ಲಿ ಚಿತ್ರೀಕರಿಸಲಾದ 45 ಸೆಕೆಂಡ್‌ಗಳ ಅವಧಿಯ ಈ ವಿಡಿಯೊ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಈಗ ವೈರಲ್ ಆಗಿರುವ ವಿಡಿಯೊದಲ್ಲಿ, ಅಪರಿಚಿತವಾದ ಈ ಸಮುದ್ರ ಜೀವಿ ನೀರಿನಿಂದ ಪದೇ ಪದೇ ಜಿಗಿಯುವುದನ್ನು ನೋಡಬಹುದು ಮತ್ತು ಅದು ಮೀನುಗಾರರಿದ್ದ ಸ್ಪೀಡ್ ಬೋಟ್ ಅನ್ನು ಬೆನ್ನಟ್ಟಲು ಪ್ರಯತ್ನಿಸುತ್ತಿದೆ. ಈ ಭಯಾನಕ ಕ್ಷಣವನ್ನು ದೋಣಿಯಲ್ಲಿದ್ದ ಅಪರಿಚಿತ ವ್ಯಕ್ತಿ ಸೆರೆಹಿಡಿದಂತೆ ತೋರುತ್ತಿದೆ.
ಒಂದು ಸಮಯದಲ್ಲಿ, ಅದು ಸ್ಪೀಡ್‌ಬೋಟ್‌ನ ಹತ್ತಿರ ಬಂದುಬಿಟ್ಟಿತ್ತು. ಕತ್ತಲೆಯಲ್ಲಿ ಹೊಳೆಯುತ್ತಿರುವ ಈ ದೈತ್ಯ ಜೀವಿಯ ಕಣ್ಣುಗಳನ್ನೂ ನಾವು ನೋಡಬಹುದು. ಆ ವೇಳೆ, ಯಾವುದೇ ಬೆಳಕು ಇರಲಿಲ್ಲವಾದ್ದರಿಂದ, ಅದು ಯಾವ ಜೀವಿ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಕಷ್ಟಕರವಾಗಿತ್ತು.
ಸಂಬಂಧಿಕರು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದರೆ ಮಾಹಿತಿ ನೀಡಿ; ಕುತೂಹಲ ಮೂಡಿಸಿದ ಇನ್ಸ್ ಪೆಕ್ಟರ್ ಆದೇಶ
ವಿಡಿಯೊವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಪೋರ್ಚುಗೀಸ್ ಭಾಷೆಯಲ್ಲಿ ಶೀರ್ಷಿಕೆಯನ್ನು ನೀಡಲಾಗಿದೆ, ಇದರರ್ಥ “ನಿನ್ನೆ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ನಿಗೂಢ ಜೀವಿಯೊಂದು ದೋಣಿಯನ್ನು ಬೆನ್ನಟ್ಟಿದೆ.”