ಹೊಸದಾಗಿ ಮದುವೆಯಾದ ಮಲೇಷ್ಯಾದ ದಂಪತಿಗಳಿಗೆ ಅವರ ಸಹೋದರ ಸಂಬಂಧಿಗಳು ಕೊಟ್ಟ ಅಚ್ಚರಿ ಉಡುಗೊರೆಯೊಂದು ಮದುವೆಗೆ ಆಗಮಿಸಿದ್ದ ಅತಿಥಿಗಳನ್ನು ನಕ್ಕೂ ನಕ್ಕೂ ನಲಿಯುವಂತೆ ಮಾಡಿದೆ.
ಅದೇನಪ್ಪ ಅಂಥ ಉಡುಗೊರೆ ಎಂದಿರಾ? ಅದು ಟಿವಿ ಸೆಟ್, ಅಥವಾ ಫ್ರಿಡ್ಜ್ ಅಥವಾ….. ಹೀಗೆ ನಿಮ್ಮ ಆಲೋಚನೆಯನ್ನು ಯಾವ ಮಟ್ಟದಲ್ಲಿ ಹರಿಯಬಿಟ್ಟರೂ ನಿಮಗೆ ಈ ಉಡುಗೊರೆಯ ಐಡಿಯಾ ಸಿಗಲ್ಲ.
ವರ ಹಾರ ಎಸೆದ ಎಂಬ ಕಾರಣಕ್ಕೆ ಮದುವೆಯೇ ರದ್ದು ಮಾಡಿದ ವಧು
ಬಿಳಿ ಪ್ಯಾಕೇಜ್ ಒಂದರ ಒಳಗೆ ಸಿಲಿಂಡರ್ ಅನ್ನು ಸುತ್ತಿದ್ದ ಮದುಮಗಳ ಸಹೋದರ ಸಂಬಂಧಿಗಳು ಅದನ್ನು ಹೆಗಲ ಮೇಲೆ ಹೊತ್ತು ತಂದಿದ್ದು, ಅವರ ಎಲ್ಲ ಸಂಬಂಧಿಗಳೂ ಈ ಕ್ಷಣವನ್ನು ಕಂಡು ಎಂಜಾಯ್ ಮಾಡಿದ್ದಾರೆ.
ಭಾರತದಲ್ಲಾಗಿದ್ದರೆ ಈ ಉಡುಗೊರೆ ಭಾರೀ ದುಬಾರಿಯದ್ದೇ ಎನ್ನಬಹುದಿತ್ತೇನೋ ! ದೇಶದಲ್ಲಿ ಅಡುಗೆ ಅನಿಲದ ದರ ಕಳೆದ ಕೆಲ ತಿಂಗಳುಗಳಿಂದ ಆಗಸದತ್ತ ಸಾಗಿದೆ. ಹೀಗಾಗಿ ಸಿಲಿಂಡರ್ ಪಡೆಯುವುದು ಒಂದು ದುಬಾರಿ ಉಡುಗೊರೆ ಪಡೆದಂತೆಯೇ ಸರಿ.