ವಿಶಾಖಪಟ್ಟಣ: ಮಗಳು ಅತಿಯಾಗಿ ಮೊಬೈಲ್ ನೋಡುತ್ತಿದ್ದರಿಂದ ಸಿಟ್ಟಾದ ತಂದೆ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ವ್ಯಾಪಾರಿಯಾಗಿರುವ ಆರೋಪಿ, ಅತಿಯಾಗಿ ಮೊಬೈಲ್ ನೋಡುತ್ತಿದ್ದರಿಂದ ಪುತ್ರಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ತಂದೆಯ ಕೃತ್ಯದಿಂದ ನೊಂದ ಬಾಲಕಿ ಶಾಲಾ ಶಿಕ್ಷಕಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಶಿಕ್ಷಕಿ ತಂದೆಯನ್ನು ಶಾಲೆಗೆ ಕರೆಸಿ ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಬಳಿಕ ಶಿಕ್ಷಕಿ ಪೊಲೀಸರಿಗೆ ಮಾಹಿತಿ ನೀಡಿದ್ದು, 42 ವರ್ಷದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.