ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿಯ ಫೋಟೋವನ್ನು ಬಳಕೆ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್ನ ವಿಭಾಗೀಯ ಪೀಠವು ತಳ್ಳಿ ಹಾಕಿದೆ.
ಮೇಲ್ಮನವಿಯನ್ನು ಆಲಿಸಿದ ಏಕ ಸದಸ್ಯ ಪೀಠವು ಅರ್ಜಿದಾರನನ್ನು ದೂಷಿಸಿದ್ದು ಮಾತ್ರವಲ್ಲದೇ ಅವರ ಮೇಲೆ ಭಾರೀ ದಂಡವನ್ನು ವಿಧಿಸುವವರೆಗೂ ಹೋಗಿತ್ತು. ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್, ಫೋಟೋಗಳನ್ನು ಬಳಕೆ ಮಾಡುವುದನ್ನು ಜಾಹೀರಾತು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಕೊರೊನಾ ಲಸಿಕೆ ಕುರಿತಂತೆ ಜನರಿಗೆ ಸಂದೇಶವನ್ನು ನೀಡುವ ಹಕ್ಕು ಪ್ರಧಾನ ಮಂತ್ರಿಗೆ ಇದೆ ಎಂದು ಹೇಳಿದ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿದಾರರಿಗೆ ದುರುದ್ದೇಶ ಇರುವಂತೆ ಕಾಣುತ್ತಿದೆ ಎಂದು ಹೇಳಿದೆ.
ಕೋವಿಡ್ ಲಸಿಕೆಗಳ ಮೇಲೆ ಪ್ರಧಾನಿ ಮೋದಿ ಫೋಟೋವನ್ನು ಬಳಕೆ ಮಾಡುವುದು ಕೇಂದ್ರದಲ್ಲಿರುವ ಆಡಳಿತಾರೂಢ ಪಕ್ಷಕ್ಕೆ ಪ್ರಚಾರ ನೀಡಿದಂತೆ ಆಗುತ್ತದೆ. ಹೀಗಾಗಿ ಕೊರೊನಾ ಲಸಿಕೆಗಳ ಪ್ರಮಾಣ ಪತ್ರದಿಂದ ಪ್ರಧಾನಿ ಮೋದಿ ಫೋಟೋವನ್ನು ತೆಗೆದು ಹಾಕಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.