ನವದೆಹಲಿ: ಬಜೆಟ್ ಪೂರ್ವ ಸಮಾಲೋಚನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆ ಸುಧಾರಣೆ ಬಗ್ಗೆ ಸಲಹೆ ನಿರೀಕ್ಷಿಸಿದ್ದಾರೆ. ವೈಯಕ್ತಿಕ ಆದಾಯದ ತೆರಿಗೆ ಬದಲಿಗೆ ಖರ್ಚು-ವೆಚ್ಚದ ಮೇಲೆ ತೆರಿಗೆ ವಿಧಿಸುವ ಪದ್ಧತಿ ಬಜೆಟ್ನಲ್ಲಿ ಘೋಷಣೆಯಾಗಲಿದೆಯೇ ಎಂದು ಚರ್ಚೆ ನಡೆದಿದೆ.
ತೆರಿಗೆ ಸುಧಾರಣೆ ಕುರಿತು ಕೆಲವರು ಸಲಹೆ ನೀಡಿದ್ದು, ಆದಾಯ ತೆರಿಗೆ ರದ್ದು ಮಾಡಿ ವೆಚ್ಚದ ಮೇಲೆ ತೆರಿಗೆ ಸಂಗ್ರಹಿಸಲು ಸಲಹೆ ನೀಡಲಾಗಿದೆ. ಆದಾಯ ತೆರಿಗೆ ರೀತಿಯಲ್ಲಿಯೇ ವೆಚ್ಚ ತೆರಿಗೆ ವ್ಯವಸ್ಥೆ ಇರಲಿದ್ದು, ಇದು ವ್ಯಕ್ತಿಯ ಆದಾಯದ ಬದಲು ಆತ ಖರ್ಚು ಮಾಡುವ ವೆಚ್ಚವನ್ನು ಅವಲಂಬಿಸಿ ವಿಧಿಸುವ ತೆರಿಗೆಯಾಗಿದೆ. ಆದರೆ ಇನ್ನೂ ಪ್ರಾಥಮಿಕ ಚರ್ಚೆಯ ಹಂತದಲ್ಲಿದೆ. ಸದ್ಯಕ್ಕೆ ಜಾರಿಯಾಗುವ ನಿರೀಕ್ಷೆ ಇಲ್ಲ ಎಂದು ಹೇಳಲಾಗಿದೆ.