ಮಿಡ್ ಕ್ಯಾಪ್ ಸೂಚ್ಯಂಕವು ಕಳೆದ 9 ತಿಂಗಳ ಅವಧಿಯಲ್ಲಿಯೇ ಅತೀ ಹೆಚ್ಚು ಕುಸಿತ ಕಂಡಿದೆ. ನಿಫ್ಟಾ ಇಂಟ್ರಾ ಡೇನಲ್ಲಿ 17000ಕ್ಕಿಂತ ಕಡಿಮೆಗೆ ಕುಸಿದಿದೆ.
ಹಾಗೂ ನಿಫ್ಟಿ ಕಳೆದ ವರ್ಷದ ಡಿಸೆಂಬರ್ 27ರ ಬಳಿಕ ಇದೇ ಮೊದಲ ಬಾರಿಗ 17 ಸಾವಿರಕ್ಕಿಂತ ಕಡಿಮೆಯಾಗಿದೆ. ಏಪ್ರಿಲ್ 2021ರಿಂದ ನಿಫ್ಟಿ ಇಂಡ್ರಾ ಡೇನಲ್ಲಿ ಇದೊಂದು ಅತೀದೊಡ್ಡ ಕುಸಿತ ಎನಿಸಿದೆ.
ನಿಫ್ಟಿ 620 ಪಾಯಿಂಟ್ಗಳಿಂದ ಭರ್ಜರಿ ಕುಸಿತ ಕಂಡಿದೆ. ಹಾಗೂ ಇದು 16,997.85ಕ್ಕೆ ಕುಸಿತ ಕಂಡಿದೆ. ಅಂದರೆ ನಿಫ್ಟಿ 17000ಕ್ಕಿಂತ ಕಡಿಮೆಯಾಗಿದೆ. ಸೆನ್ಸೆಕ್ಸ್ನಲ್ಲಿ 2000 ಅಂಕಗಳ ಭಾರೀ ಕುಸಿತವು ದಾಖಲಾಗಿದೆ.
ಮಧ್ಯಾಹ್ನ 2:13ರ ಸುಮಾರಿಗೆ ಸೆನ್ಸೆಕ್ಸ್ 1960.53 ಅಂಕ ಅಂದರೆ 3.32 ಶೇಕಡಾ ಕುಸಿದ ಪರಿಣಾಮ 57,076.65ರಲ್ಲಿ ವಹಿವಾಟನ್ನು ನಡೆಸುತ್ತಿದೆ. ನಿಫ್ಟಿ 597. 70 ಅಂಕ ಅಥವಾ 3.39 ಶೇಕಡಾಗೆ ಕುಸಿದು 17, 019ಕ್ಕೆ ಕುಸಿತ ಕಂಡಿದೆ.
ಇಂದು ಷೇರು ಮಾರುಕಟ್ಟೆ ಪತನವಾದ ಪರಿಣಾಮ ಮಾರುಕಟ್ಟೆ ಬಂಡವಾಳದಲ್ಲಿ ಹೂಡಿಕೆದಾರರ ಒಟ್ಟು 8 ಲಕ್ಷ ಕೋಟಿ ರೂಪಾಯಿಗಳು ಮುಳುಗಿದೆ. ಶುಕ್ರವಾರದಂದು ಮಾರುಕಟ್ಟೆ ಬಂಡವಾಳ 270 ಲಕ್ಷ ಕೋಟಿಗಳಷ್ಟಿತ್ತು. ಇಂದು ಇದು 262 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.