ಒಮಿಕ್ರಾನ್ ಹಾಗೂ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕಠಿಣ ನಿರ್ಬಂಧಗಳನ್ನು ಏರಿರುವ ನ್ಯೂಜಿಲ್ಯಾಂಡ್ ಪ್ರಧಾನಿ ತಮ್ಮ ಮದುವೆಗೂ ಬ್ರೇಕ್ ಹಾಕಿದ್ದಾರೆ. ಹೌದು, ನಿಯಮಗಳನ್ನು ಅನುಸರಿಸಲು ನನ್ನ ಮದುವೆಯನ್ನ ರದ್ದುಗೊಳಿಸುತ್ತೇನೆ ಎಂದು ಖುದ್ದು ಪ್ರಧಾನಿ ಜಸಿಂಡಾ ಅರ್ಡೆನ್ ಮಾಹಿತಿ ನೀಡಿದ್ದಾರೆ.
ಆಕ್ಲಂಡ್ ನಲ್ಲಿ ನಡೆದ ಒಂದು ಮದುವೆಯ ನಂತರ ನ್ಯೂಜಿಲ್ಯಾಂಡ್ ನಲ್ಲಿ ಒಮಿಕ್ರಾನ್ ಕ್ಲಸ್ಟರ್ ಸೃಷ್ಟಿಯಾಗಿದ್ದಲ್ಲದೆ, ಉತ್ತರದಿಂದ ದಕ್ಷಿಣದ ದ್ವೀಪಗಳಿಗೆ ಸಮುದಾಯವಾಗಿ ಹರಡುವಂತ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಭಾನುವಾರದಿಂದ ಮಾಸ್ಕ್ ಕಡ್ಡಾಯಗೊಳಿಸಿರುವ ಸರ್ಕಾರ, ಹೆಚ್ಚು ಜನರು ಒಟ್ಟಿಗೆ ಒಂದೇ ಕಡೆ ಸೇರುವುದನ್ನು ನಿರ್ಬಂಧಿಸಿದೆ.
ಪತ್ರಿಕಾಗೋಷ್ಠಿ ಸಂದರ್ಭದಲ್ಲೇ ಭೂಕಂಪನ; ಕ್ಷಣಾರ್ಧದಲ್ಲೇ ಸಾವರಿಸಿಕೊಂಡು ಮಾತು ಮುಂದುವರಿಸಿದ ಪ್ರಧಾನಿ
ದೇಶದಲ್ಲಿ ಪ್ರಕರಣಗಳು ಹೆಚ್ಚಿರುವುದರಿಂದ ಕಠಿಣ ನಿಯಮಗಳನ್ನು ಅನುಸರಿಸಲಾಗುತ್ತದೆ. ಇಡೀ ದೇಶ ಕೊರೋನಾ ನಿಯಮಗಳ ಚೌಕಟ್ಟಿನಲ್ಲಿರುತ್ತದೆ. ಮಾಸ್ಕ್ ಧರಿಸುವುದು ಕಡ್ಡಾಯ. ಬಾರ್ ಮತ್ತು ರೆಸ್ಟೋರೆಂಟ್, ಮದುವೆಯಂತಹ ಕಾರ್ಯಕ್ರಮಗಳಲ್ಲಿ 100 ಜನರು ಭಾಗವಹಿಸಬಹುದು, ವ್ಯಾಕ್ಸಿನ್ ಕಡ್ಡಾಯ. ವ್ಯಾಕ್ಸಿನ್ ನಿಯಮ ಪಾಲಿಸದ ಜಾಗಗಳಲ್ಲಿ, 25ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಪ್ರಧಾನಿ ಆರ್ಡೆನ್ ಹೇಳಿದ್ದಾರೆ. ಇದೇ ಸಮಯದಲ್ಲಿ ತನ್ನ ಮದುವೆ ಬಗ್ಗೆ ಮಾತನಾಡಿದ ಅವರು, ಕೋವಿಡ್ ನಿಯಮಗಳನ್ನ ಪಾಲಿಸುವ ಸಲುವಾಗಿ ನನ್ನ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ.
ಸಧ್ಯಕ್ಕೆ ನನ್ನ ಮದುವೆ ನಡೆಯುವುದಿಲ್ಲ ಎಂದಿರುವ ಅವರು ಮುಂದಿನ ದಿನಾಂಕವನ್ನು ಬಹಿರಂಗಪಡಸಿಲ್ಲ. ಆದರೆ ಕೆಲವೇ ದಿನಗಳಲ್ಲಿ ಪ್ರಧಾನಿಯವರ ಮದುವೆ ನಡೆಯಬಹುದು ಎಂಬ ವದಂತಿಗಳಿವೆ. ಜಸಿಂಡಾ ಹಾಗೂ ಕ್ಲಾರ್ಕ್ ಗೇಫೋರ್ಡ್ ದೀರ್ಘಾವದಿಯಿಂದ ಪ್ರೀತಿಸುತ್ತಿದ್ದು, ಈ ವರ್ಷ ಮದುವೆಯಾಗಲು ತೀರ್ಮಾನಿಸಿದ್ದರು.