ಪ್ರತಿಕೂಲ ಹವಾಮಾನದಿಂದಾಗಿ ಗೋಚರತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನೋಯ್ಡಾ ಪೊಲೀಸರು ತಮ್ಮ ವಾಹನಗಳ ಮೇಲೆ ರಿಫ್ಲೆಕ್ಟಿವ್ ಟೇಪ್ಗಳನ್ನು ಅಂಟಿಸಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಉಂಟಾಗಬಲ್ಲ ರಸ್ತೆ ಅಪಘಾತಗಳನ್ನು ತಡೆಯಲು ಇದೊಂದು ಅತ್ಯವಶ್ಯಕ ಕ್ರಮವಾಗಿದೆ. ವಾಹನಗಳು ಮಾತ್ರವಲ್ಲದೇ ಪೊಲೀಸರು ಬ್ಯಾರಿಕೇಡ್ಗಳು ಹಾಗೂ ವಿವಿಧ ಕಂಬಗಳಲ್ಲಿ ಇಂತಹ ಟೇಪ್ಗಳನ್ನು ಅಂಟಿಸಿದ್ದಾರೆ.
ಇದೀಗ ಇದೇ ದಿಶೆಯಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಟ್ರಾಫಿಕ್ ಪೊಲೀಸರು ವಾಹನಗಳ ಮೇಲೆ ರಿಫ್ಲೆಕ್ಟಿವ್ ಟೇಪ್ಗಳನ್ನು ಕಡ್ಡಾಯಗೊಳಿಸಿದ್ದಾರೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಡಿಎನ್ಡಿ ಫ್ಲೈ ಬೇ ಟೋಲ್ ಪ್ಲಾಜಾದಲ್ಲಿ ರಿಫ್ಲೆಕ್ಟಿವ್ ಟೇಪ್ಗಳನ್ನು ಅಂಟಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ರಿಫ್ಲೆಕ್ಟಿವ್ ಟೇಪ್ಗಳು ಪ್ರತಿಫಲನ ಗುಣ ಹೊಂದಿರುವ ಹಿನ್ನೆಲೆಯಲ್ಲಿ ಚಾಲಕರಿಗೆ ಮುಂಬದಿಯಲ್ಲಿ ವಾಹನ ಬರುತ್ತಿದೆ ಎಂಬ ಸಂದೇಶ ಸಿಗುತ್ತದೆ. ಅದರಲ್ಲೂ ಟ್ರಕ್ ಹಾಗೂ ಟ್ರ್ಯಾಕ್ಟರ್ನಂತಹ ವಾಹನಗಳಿಗಂತೂ ರಿಫ್ಲೆಕ್ಟಿವ್ ಟೇಪ್ಗಳು ಅತ್ಯವಶ್ಯಕವಾಗಿದೆ.
ಈ ನಿಯಮವು ಸರಿಯಾಗಿ ಅನುಷ್ಠಾನಕ್ಕೆ ಬಂದ ಬಳಿಕ ರಿಫ್ಲೆಕ್ಟಿವ್ ಟೇಪ್ಗಳನ್ನು ಅಳವಡಿಸದ ಜನರಿಗೆ 1000 ರೂಪಾಯಿ ದಂಡ ವಿಧಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.