ಕಿಶೋರ್ ಕುಮಾರರ ಜನಪ್ರಿಯ ಹಾಡೊಂದನ್ನು ಹಾಡುತ್ತಿರುವ ಇಂಡೋ-ಫ್ರೆಂಚ್ ಜೋಡಿಯೊಂದರ ವಿಡಿಯೋವೊಂದು ವೈರಲ್ ಆಗಿದೆ.
ಕೋಲ್ಕತ್ತಾದ ಮೇಘದೂತ್ ರಾಯ್ ಚೌಧರಿ ಮತ್ತು ಫ್ರಾನ್ಸ್ನ ಪೌಲಿನ್ ಲಾರಾವಾಯ್ರ್ ದಂಪತಿ 1972ರ ಚಿತ್ರ ’ಜವಾನಿ ದಿವಾನಿಗೆ’ ಕಿಶೋರ್ ಕುಮಾರರ ’ಸಾಮ್ನೇ ಯೇ ಕೌನ್ ಆಯಾ’ ಹಾಡನ್ನು ಹಾಡಿದ್ದಾರೆ.
ʼಸರಿಗಮಪʼ ವೇದಿಕೆಯಲ್ಲಿ ಹಾಡು ಹಾಡಿದ ಸ್ಪಿನ್ ಮಾಂತ್ರಿಕ..!
“ಈ ವಾರದ ಇಂಡೋ ಫ್ರೆಂಚ್ ಭಾನುವಾರದ ಗಾಯನದ ಭಾಗವಾಗಿ ಪೌಲ್ ಲಾರಾವಾಯ್ರ್ ಜೊತೆಗೆ ʼಸಾಮ್ನೇ ಯೇ ಕೌನ್ ಆಯಾʼ ಹಾಡಿದ್ದೇವೆ. ಈ ಹಿಂದೆ ಕಿಶೋರ್ ಕುಮಾರರ ಹಾಡನ್ನು ಪ್ರಯತ್ನ ಪಟ್ಟಿರಲಿಲ್ಲ. ಹಾಗಾಗಿ ಭಾರೀ ವಿನೋದಮಯವಾಗಿರುವುದನ್ನು ಆಯ್ದುಕೊಂಡಿದ್ದೇವೆ. ಮನೆಯಲ್ಲಿ ಕ್ವಾರಂಟೈನ್ ಹೀಗೇ ಮುಂದುವರೆದರೆ, ನಿಮಗಾಗಿ ಪ್ರತಿ ವಾರಾಂತ್ಯ ಹೊಸ ಹಾಡೊಂದನ್ನು ಆಯ್ದುಕೊಂಡು ಹಾಡುವುದನ್ನು ಬಹುಶಃ ನೀವು ನೋಡಬಹುದು,” ಎಂದು ಮೇಘ್ದೂತ್ ತಿಳಿಸಿದ್ದಾರೆ.
https://youtu.be/azFNqipd4Zk