![](https://kannadadunia.com/wp-content/uploads/2022/01/three-gujarat-cops.jpg)
ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಕುಣಿಯುತ್ತಾ ವಿಡಿಯೋ ಮಾಡಿಕೊಂಡು ವೈರಲ್ ಆಗಿರುವ ಮೂವರು ಪೇದೆಗಳನ್ನು ಗುಜರಾತ್ ಪೊಲೀಸ್ ಇಲಾಖೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಸಮವಸ್ತ್ರದಲ್ಲಿರುವ ನಾಲ್ವರು ಪೇದೆಗಳು ಕಾರಿನ ಸ್ಟಿರಿಯೋ ಸೆಟ್‌ನಲ್ಲಿ ಬರುತ್ತಿರುವ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವೇಳೆ ಪೇದೆಗಳು ಸೇಫ್ಟಿ ಬೆಲ್ಟ್‌ಗಳನ್ನಾಗಲೀ, ಮಾಸ್ಕ್‌ಗಳನ್ನಾಗಲೀ ಧರಿಸಿರಲಿಲ್ಲ.
ಗೃಹ ಸಾಲಗಾರರಿಗೆ ಗುಡ್ ನ್ಯೂಸ್: ಹೋಮ್ ಲೋನ್ ಇನ್ಶೂರೆನ್ಸ್ ಮೇಲೆ ಪ್ರತ್ಯೇಕ ತೆರಿಗೆ ವಿನಾಯಿತಿ ಲಾಭ
ಜಗದೀಶ್ ಸೋಲಂಕಿ, ಹರೇಶ್ ಚೌಧರಿ ಮತ್ತು ರಾಜಾ ಹಿರಾಗಾರ್ ಎಂದು ಗುರುತಿಸಲಾದ ಈ ಪೇದೆಗಳು ಗಾಂಧಿಧಾಮ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಕಚ್ಛ್-ಗಾಂಧಿಧಾಮದ ಪೊಲೀಸ್ ವರಿಷ್ಠಾಧಿಕಾರಿ ಮಯೂರ್ ಪಾಟೀಲ್, ತಕ್ಷಣದಿಂದಲೇ ಮೂವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.