ಜಪಾನಿನ ವಾಹನ ತಯಾರಕ, ಟೊಯೊಟಾ ವೇಗವಾಗಿ ಬೆಳೆಯುತ್ತಿರುವ ಭಾರತೀಯ ವಾಹನ ಮಾರುಕಟ್ಟೆಗಾಗಿ ಎರಡು ಹೊಸ ಆಸಕ್ತಿದಾಯಕ ಹಾಗೂ ಉಪಯುಕ್ತ ವಾಹನಗಳನ್ನು ಸಿದ್ಧಪಡಿಸುತ್ತಿದೆ. ಕಂಪನಿಯು ಮುಖ್ಯವಾಹಿನಿಯ SUV (D22) ಮತ್ತು ಎಲ್ಲಾ-ಹೊಸ ವಿವಿಧೋದ್ದೇಶ ವಾಹನವನ್ನು (560B) ಅಭಿವೃದ್ಧಿಪಡಿಸುತ್ತಿದೆ. ಹೊಸ ಮಾದರಿಗಳನ್ನು ಟೊಯೊಟಾದ ಬಿಡದಿ ಸ್ಥಾವರದಲ್ಲಿ ಉತ್ಪಾದಿಸಲಾಗುವುದು.
ಹೊಸ ಮಧ್ಯಮ ಗಾತ್ರದ SUV ಅನ್ನು ಮುಂಬರುವ ಹಬ್ಬದ ಋತುವಿನಲ್ಲಿ, ದೀಪಾವಳಿಯ ಆಸುಪಾಸಿನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಸುಜುಕಿ ಮತ್ತು ಟೊಯೋಟಾ ನಡುವಿನ ಉತ್ಪನ್ನ ಹಂಚಿಕೆ ಒಪ್ಪಂದದ ಅಡಿಯಲ್ಲಿ ಹೊಸ ಎಸ್ಯುವಿಯನ್ನು ಮಾರುತಿ ಸುಜುಕಿ ಬ್ರಾಂಡ್ನೊಂದಿಗೆ ಹಂಚಿಕೊಳ್ಳಲಾಗುತ್ತದೆ. YFG ಎಂಬ ಸಂಕೇತನಾಮ ಹೊಂದಿರುವ ಸುಜುಕಿಯ ಆವೃತ್ತಿಯು ಗಮನಾರ್ಹವಾಗಿ ವಿಭಿನ್ನ ವಿನ್ಯಾಸ ಮತ್ತು ಇಂಟೀರಿಯರ್ ನೊಂದಿಗೆ ಬರಲಿದೆ.
ಬೆಡ್ ರೂಮ್ ಇಲ್ಲದ ಈ ಮನೆ ಬೆಲೆ 15 ಕೋಟಿ ರೂ…!
ಹೊಸ ಟೊಯೋಟಾ C-ಸೆಗ್ಮೆಂಟ್ MPV, 560B ವೇರಿಯಂಟ್ ಅನ್ನು 2023 ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದು ಜಾಗತಿಕ ರೇಂಜ್ ಹಾಗೂ ನ್ಯೂ-ಜೆನ್ ಆಧಾರವಾಗಿರುವ ಟೊಯೋಟಾದ DNGA (ದೈಹತ್ಸು ನ್ಯೂ ಜನರೇಷನ್ ಆರ್ಕಿಟೆಕ್ಚರ್) ಅನ್ನು ಆಧರಿಸಿದೆ ಎಂದು ನಿರೀಕ್ಷಿಸಲಾಗಿದೆ. ಮುಂಬರುವ ಮಧ್ಯಮ ಗಾತ್ರದ SUV ಅನ್ನು ಅಭಿವೃದ್ಧಿಪಡಿಸಲು DNGAಯನ್ನು ಸಹ ಬಳಸಲಾಗುತ್ತದೆ.
ಹೊಸ ಟೊಯೋಟಾ 7-ಸೀಟರ್ MPV ಬೆಲೆ, ಎರ್ಟಿಗಾ ಮತ್ತು ಇನ್ನೋವಾ ಕ್ರಿಸ್ಟಾದ ನಡುವೆ ಇರಬಹುದು ಎಂದು ಹೇಳಲಾಗ್ತಿದೆ. ಇದು ಕಿಯಾ ಕ್ಯಾರೆನ್ಸ್ ಮತ್ತು ಮಹೀಂದ್ರಾ ಮೊರಾಜೊಗೆ ಪ್ರತಿಸ್ಪರ್ಧಿಯಾಗಲಿದೆ. ಹೊಸ MPV ಟೊಯೋಟಾದ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರಲಿದೆ. ಮಧ್ಯಮ ಗಾತ್ರದ SUV ಯಂತೆಯೇ, ಹೊಸ ಟೊಯೋಟಾ MPV ಅನ್ನು ಸಹ ಮಾರುತಿ ಸುಜುಕಿಯೊಂದಿಗೆ ಹಂಚಿಕೊಳ್ಳುವ ನಿರೀಕ್ಷೆಯಿದೆ.