alex Certify ಟಾಯ್ಲೆಟ್​ ಫ್ಲಶ್ ಅತಿಯಾದ ಸದ್ದಿನಿಂದ ಮಾನವ ಹಕ್ಕುಗಳ ಉಲ್ಲಂಘನೆ : ಇಟಲಿ ಕೋರ್ಟ್​ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಯ್ಲೆಟ್​ ಫ್ಲಶ್ ಅತಿಯಾದ ಸದ್ದಿನಿಂದ ಮಾನವ ಹಕ್ಕುಗಳ ಉಲ್ಲಂಘನೆ : ಇಟಲಿ ಕೋರ್ಟ್​ ಮಹತ್ವದ ಆದೇಶ

ಎರಡು ದಶಕಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಇಟಲಿಯ ದಂಪತಿ ಜಯ ಸಾಧಿಸಿದ್ದಾರೆ. ಈ ಪ್ರಕರಣದಲ್ಲಿ ದಂಪತಿ 2ನೇ ವಿಶ್ವ ಯುದ್ಧದದ ನಂತರ ಅಂತರಾಷ್ಟ್ರೀಯ ಒಪ್ಪಂದವನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಿದ್ದಾರೆ. ಇದರಲ್ಲಿ ಟಾಯ್ಲೆಟ್​​ನ ಫ್ಲಶ್​ನಿಂದ ಹೊರಬರುವ ಶಬ್ದದ ಮಿತಿಯನ್ನು ನಿಯಂತ್ರಿಸುವ ಬಗ್ಗೆ ಉಲ್ಲೇಖಿಸಲಾಗಿದೆ.

2 ದಶಕಗಳ ಹಳೆಯ ‘ಫ್ಲಶ್ ವಿವಾದ’ :
ರೋಮ್​ನ ದಿನಪತ್ರಿಕೆಯಾದ ‘ಲಾ ರಿಪಬ್ಲಿಕಾ’ದ ಪ್ರಕಾರ ನೆರೆಹೊರೆಯವರ ನಡುವಿನ ವಿವಾದವು 2 ದಶಕಗಳ ಹಿಂದೆಯೇ ಆರಂಭವಾಯಿತು. ಇದು ಕಳೆದ ವಾರ ಇಟಲಿಯ ಸುಪ್ರೀಂ ಕೋರ್ಟ್​ನಲ್ಲಿ ಇತ್ಯರ್ಥಗೊಂಡಿದೆ. ವಾಸ್ತವವಾಗಿ ಈ ವಿವಾದವು 2003ರಲ್ಲಿ ನಾಲ್ವರು ಸಹೋದರರು ವಾಯುವ್ಯ ಇಟಲಿಯ ಲಾ ಸ್ಪೆಜಿಯಾ ಜಿಲ್ಲೆಯ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಹೊಸ ಶೌಚಾಲಯ ನಿರ್ಮಿಸಿದಾಗ ಆರಂಭವಾಗಿತ್ತು .

ಅಕ್ಕಪಕ್ಕದವರ ನಿದ್ದೆ ಕೆಡಿಸಿತ್ತು ಫ್ಲಶ್​ ಸದ್ದು :
ಈ ಟಾಯ್ಲೆಟ್​ ಫ್ಲಶ್​ ಶಬ್ದ ಎಷ್ಟು ದೊಡ್ಡದಾಗಿತ್ತು ಅಂದರೆ ಅದು ಅಕ್ಕಪಕ್ಕದವರ ನಿದ್ದೆಗೆಡಿಸಿತ್ತು. ಈ ಬಗ್ಗೆ ನೆರೆಹೊರೆಯವರು ದೂರನ್ನು ನೀಡಿದರು. ಈ ಮನೆಯಲ್ಲಿ ವಾಸವಿದ್ದವರು ರಾತ್ರಿ ವೇಳೆಯಲ್ಲಿಯೂ ಶೌಚಾಲಯ ಬಳಸುತ್ತಿದ್ದರಿಂದ ಫ್ಲಶ್​ನ ಸದ್ದು ಜೋರಾಗಿ ಕೇಳುತ್ತಿತ್ತು, ಇದು ನಮ್ಮ ನಿದ್ದೆಗೆಡಿಸುತ್ತೆ ಎಂಬುದು ನೆರೆಹೊರೆಯವರ ಆರೋಪವಾಗಿತ್ತು. ಈ ವಿವಾದವು ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಈ ಪ್ರಕರಣವನ್ನು ವಿಚಾರಣಾ ನ್ಯಾಯಾಧೀಶರು ವಜಾಗೊಳಿಸಿದರು.

ಕೋರ್ಟ್​ನಲ್ಲಿ ಪ್ರಕರಣ ವಜಾಗೊಂಡ ಬಳಿಕ ದಂಪತಿ ಈ ಜಿನೋವಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಅಲ್ಲಿ ನ್ಯಾಯಾಲಯವು ಫ್ಲಶ್​​ನ ಶಬ್ದವನ್ನು ಆಲಿಸಿದೆ. ಹಾಗೂ ಆ ಶಬ್ದವು ತುಂಬಾ ಜೋರಾಗಿದೆ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ.

ಬಳಿಕ ಈ ಕೇಸು ಇಟಲಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಆದರೆ ಕೊನೆಗೂ ತೀರ್ಪು ದಂಪತಿಯ ಪರವಾಗಿ ಬಂದಿದೆ. ಫ್ಲಶ್​​ನ ಅತಿಯಾದ ಶಬ್ದ ದಂಪತಿಯ ಖಾಸಗಿ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಎಂದು ತೀರ್ಪು ನೀಡಿದ ನ್ಯಾಯಾಲಯ ಶೌಚಾಲಯವನ್ನು ಸೀಲ್​ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...