ಕವರ್ ಮೇಲೆ ದೇವರ ಚಿತ್ರ: ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಕ್ಷಮೆಯಾಚಿಸಿದ ‘ಕಿಟ್ ಕ್ಯಾಟ್’ 20-01-2022 5:57AM IST / No Comments / Posted In: Business, Latest News ನೆಸ್ಲೆ ಕಂಪನಿಯ ಪ್ರಸಿದ್ಧ ಉತ್ಪನ್ನಗಳಲ್ಲಿ ಒಂದಾದ ಕಿಟ್ಕ್ಯಾಟ್ ಬಗ್ಗೆ ನಿಮಗೆ ತಿಳಿದೇ ಇರಬಹುದು. ಆದರೆ ಇದೀಗ ಕಿಟ್ಕ್ಯಾಟ್ ತನ್ನ ವ್ರ್ಯಾಪರ್ ವಿನ್ಯಾಸದ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧವನ್ನು ಸಂಪಾದಿಸಿದೆ. ಎಫ್ಎಂಸಿಜಿ ಕಂಪನಿಯು ಪ್ರಚಾರದ ಗಿಮಿಕ್ಗಾಗಿ ಕಿಟ್ಕ್ಯಾಟ್ ವ್ರ್ಯಾಪರ್ಗಳ ಮೇಲೆ ಭಗವಾನ್ ಜಗನ್ನಾಥ, ಬಲಭದ್ರೆ ಹಾಗೂ ಸುಭದ್ರರ ಚಿತ್ರಗಳನ್ನು ಹಾಕಿದೆ. ಆದರೆ, ಈ ಪ್ರಚಾರದ ಗಿಮಿಕ್ ಕಂಪನಿಗೆ ಉಲ್ಟಾ ಹೊಡೆದಿದೆ. ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ದಯಮಾಡಿ ಕಿಟ್ಕ್ಯಾಟ್ ವ್ರ್ಯಾಪರ್ನ ಮೇಲಿರುವ ಜಗನ್ನಾಥ, ಬಲಭದ್ರೆ ಹಾಗೂ ಮಾತಾ ಸುಭದ್ರರ ಫೋಟೋವನ್ನು ತೆಗೆದು ಹಾಕಬೇಕು. ಪ್ರತಿಯೊಬ್ಬರೂ ಚಾಕಲೇಟ್ ತಿಂದ ಬಳಿಕ ಅದರ ಕವರ್ನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಕೆಲವರು ರಸ್ತೆಗಳ ಮೇಲೂ ಬಿಸಾಡುತ್ತಾರೆ. ಹೀಗಾಗಿ ಈ ಫೋಟೋಗಳನ್ನು ದಯವಿಟ್ಟು ತೆಗೆದು ಹಾಕಿ ಎಂದು ಬರೆದಿದ್ದಾರೆ. ನಮ್ಮ ಓಡಿಶಾದ ಸಂಸ್ಕೃತಿ, ಜಗನ್ನಾಥ ದೇವರು, ಬಲಭದ್ರ ಹಾಗೂ ಸುಭದ್ರರ ಫೋಟೋಗಳನ್ನು ಕಿಟ್ಕ್ಯಾಟ್ ಮೇಳೆ ನೋಡುವುದು ನಿಜಕ್ಕೂ ಸಂತೋಷಕರ ವಿಚಾರವೇ. ಆದರೆ ಯಾರಾದರೂ ಚಾಕಲೇಟ್ ತಿಂದಮೇಲೆ ಅದರ ವ್ರ್ಯಾಪರ್ನ್ನು ಕಸದತೊಟ್ಟಿ, ಚರಂಡಿ,ರಸ್ತೆಗಳಲ್ಲಿ ಬಿಸಾಡುತ್ತಾರೆ. ಕೆಲವರು ಇದರ ಮೇಲೆಯೇ ನಡೆದಾಡುತ್ತಾರೆ. ಜಗನ್ನಾಥನ ಕುಟುಂಬಕ್ಕೆ ಇದರಿಂದ ಸಂತಸವಾಗುತ್ತದೆ ಎಂದು ಮತ್ತೊಬ್ಬರು ಟ್ವೀಟಾಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಫ್ಎಂಸಿಜಿ ಕ್ಷಮೆಯಾಚಿಸಿದೆ ಹಾಗೂ ಜನರ ಭಾವನೆಗಳಿಗೆ ಧಕ್ಕೆ ತರುವ ವಿಚಾರ ನಮ್ಮದಾಗಿರಲಿಲ್ಲ ಎಂದು ಹೇಳಿದೆ. It is a honor to see our Odisha culture & lord jagannath, balabhadra & subhadra on ##KitKat but plz think once, whn some1 will eat 🍫 & will throw the wrapper into dustbins, drains, gutters & many will walk on it 😭. Jagannath family will be happy with it. @CMO_Odisha @PMOIndia pic.twitter.com/10xPKsdz5c — Sanjeeb Kumar Shaw (@sanjeebshaw1) January 16, 2022