ರಾಜ್ಯದಲ್ಲಿ ಕೋವಿಡ್ ಆರ್ಭಟ ಜೋರಾಗುತ್ತಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಾರ ಕಮ್ಮಿ ಮಾಡಲು ಸಿದ್ಧತೆ ನಡೆಸಿರುವ ಪಿಯು ಬೋರ್ಡ್, ಸರಳೀಕೃತ ಪಿಯು ಪರೀಕ್ಷೆ ನಡೆಸಲು ಸಿದ್ಧವಾಗಿದೆ. ಕೊರೋನಾ ಸಂದರ್ಭದಲ್ಲಿ ಮಕ್ಕಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಬಾರಿಯ ಪರೀಕ್ಷೆಯನ್ನ ಸರಳ ಮಾದರಿಯಲ್ಲಿ ನಡೆಸಲು ಮುಂದಾಗಿದೆ.
ನಿನ್ನೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬೆನ್ನಲ್ಲೆ ಪರೀಕ್ಷೆಗೆ ಸಿದ್ಧತೆ ನಡೆಸಿದೆ. ಎಲ್ಲಾ ಭಾಗದ ವಿದ್ಯಾರ್ಥಿಗಳನ್ನು ಗಮನಕ್ಕೆ ತೆಗೆದುಕೊಂಡು ಪರೀಕ್ಷೆಗಳನ್ನ ಹೇಗೆ, ಎಲ್ಲಿ ನಡೆಸಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ವೇಳೆ ಪರೀಕ್ಷೆಗೆ ಪಠ್ಯ ಕಡಿತ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಕೊರೋನಾ ಕಾರಣದಿಂದ ಗ್ರಾಮೀಣ ಸೇರಿದಂತೆ ಹಲವು ಭಾಗಗಳಲ್ಲಿ ಪೂರ್ಣವಾಗಿ ಪಠ್ಯ ಬೋಧನೆಯಾಗಿಲ್ಲ ಎನ್ನುವ ಅಂಶವನ್ನ ಗಣನೆಗೆ ತೆಗೆದುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ. ಭಾಷಾ ವಿಷಯದಲ್ಲಿ 30% ಅಷ್ಟು ಪಠ್ಯವನ್ನ ಕಡಿತಗೊಳಿಸಿದ್ದು, 70% ಪಠ್ಯವನ್ನ ಪರೀಕ್ಷೆಗೆ ಸೇರಿಸಲಾಗಿದೆ.
ಈ ರಾಶಿಯಲ್ಲಿ ಜನಿಸಿದ ವಿದ್ಯಾರ್ಥಿಗಳಿಗೆ ಕಾದಿದೆ ಶುಭ ಯೋಗ
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಳೀಕೃತ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಿ, ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಮಾಡಲು ಇಲಾಖೆ ನಿರ್ಧರಿಸಿದೆ. 30% ಪಠ್ಯ ಕಡಿತದ, ಪರೀಕ್ಷೆಯಲ್ಲಿ ಹೆಚ್ಚಾಗಿ ಬಹು ಆಯ್ಕೆಯ ಪ್ರಶ್ನೆಗಳನ್ನ ನೀಡಲಿದೆ. ದ್ವಿತೀಯ ಪಿಯು ಮಾತ್ರವಲ್ಲ ಪ್ರಥಮ ವರ್ಷದವರ ಪಠ್ಯದಲ್ಲೂ ಕಡಿತ ಮಾಡಲಾಗಿದೆ. ಭಾಷಾ ವಿಷಯದಲ್ಲಿ ಮಾತ್ರ ಪರೀಕ್ಷಾ ಪಠ್ಯ ಕಡಿತವಾಗಿದ್ದು, ಐಚ್ಛಿಕ ವಿಷಯಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಇಲಾಖೆ ಆದೇಶ ಹೊರಡಿಸಿದೆ.