ಎಲೆಕ್ಟ್ರಾನಿಕ ಸಿಗರೇಟ್ ಸೇದುವವರು ಕೋವಿಡ್-19 ಸೋಂಕಿಗೆ ತುತ್ತಾಗುವ ಸಾಧ್ಯತೆಗಳು ಅಧಿಕವಾಗಿವೆ ಎಂದು ಮೇಯೋ ಕ್ಲಿನಿಕ್‌ನ ಹೊಸ ಸಂಶೋಧನೆಯಿಂದ ತಿಳಿದು ಬಂದಿದೆ.
ಜರ್ನಲ್ ಆಫ್ ಪ್ರೈಮರಿ ಕೇರ್ ಮತ್ತು ಕಮ್ಯೂನಿಟಿ ಹೆಲ್ತ್ ಹೆಸರಿನ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಈ ಅಧ್ಯಯನ ವರದಿಯಲ್ಲಿ, ವೇಪಿಂಗ್ ಮಾಡುವ ಹಾಗೂ ತಂಬಾಕು ಸೇದುವ ಮಂದಿ ಕೋವಿಡ್ ಪಾಸಿಟಿವ್ ಕಂಡು ಬಂದಲ್ಲಿ, ಅವರಲ್ಲಿ ಉಸಿರಾಟ ಸಿಕ್ಕಾಪಟ್ಟೆ ಕಷ್ಟವಾಗಲಿದ್ದು, ವೇಪಿಂಗ್ ಮಾಡದೇ ಇರುವ ಮಂದಿಗಿಂತ ಹೆಚ್ಚಾಗಿ ತುರ್ತು ಚಿಕಿತ್ಸೆಗಳನ್ನು ಪಡೆಯಬೇಕಾಗಿ ಬಂದಿದೆ ಎಂದು ತಿಳಿಸಲಾಗಿದೆ.
coronavirus: ಯೂರೋಪ್ ನಲ್ಲಿ ಹೆಚ್ಚಾದ ಒಮಿಕ್ರಾನ್ ಭೀತಿ, ಅಮೇರಿಕಾವನ್ನೆ ಗೊಂದಲಕ್ಕೆ ತಳ್ಳಿದ ಹೊಸ ವೈರಸ್
ಅಧ್ಯಯನ ತಂಡವು ವೇಪಿಂಗ್ ಚಟ ಇರುವ 280 ಕ್ಕಿಂತ ಹೆಚ್ಚಿನ ಕೋವಿಡ್ ಪಾಸಿಟಿವ್ ಸೋಂಕಿತರನ್ನು ಸಂದರ್ಶನಕ್ಕೊಳಪಡಿಸಿದ್ದು, ಇವರನ್ನು ವೇಪಿಂಗ್ ಮಾಡದೇ ಇರುವ 1,445 ಮಂದಿಯೊಂದಿಗೆ ಹೋಲಿಕೆ ಮಾಡಿದೆ.
ಈ ವೇಳೆ ವೇಪಿಂಗ್ ಮಾಡುವ ಮಂದಿಯಲ್ಲಿ ಕೋವಿಡ್ ಲಕ್ಷಣಗಳು ವೇಪಿಂಗ್ ಮಾಡದೇ ಇರುವ ಮಂದಿಗಿಂತ ಹೆಚ್ಚಾಗಿ ಕಂಡು ಬಂದಿದೆ ಎಂದು ತಿಳಿದು ಬಂದಿದೆ.