alex Certify BIG NEWS: ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಕೇಸ್ ಶೇ.75ರಷ್ಟು ಹೆಚ್ಚಳ; ಲಸಿಕೆ ಪಡೆಯದವರ ಮೇಲೆ ಒಮಿಕ್ರಾನ್ ಪ್ರಭಾವ; ಆರೋಗ್ಯ ಸಚಿವ ಸುಧಾಕರ್ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಕೇಸ್ ಶೇ.75ರಷ್ಟು ಹೆಚ್ಚಳ; ಲಸಿಕೆ ಪಡೆಯದವರ ಮೇಲೆ ಒಮಿಕ್ರಾನ್ ಪ್ರಭಾವ; ಆರೋಗ್ಯ ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಶೇ.75 ರಷ್ಟು ಹಾಗೂ ಉಳಿದ ಜಿಲ್ಲೆಗಳಲ್ಲಿ ಶೇ.25 ರಷ್ಟು ಹೆಚ್ಚಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಮೊದಲ ಅಲೆಯಲ್ಲಿ ಡಬ್ಲಿಂಗ್ ರೇಟ್ 10-12 ದಿನಗಳ ಅಂತರ ಇತ್ತು. ಎರಡನೇ ಅಲೆಯಲ್ಲಿ ಡಬ್ಲಿಂಗ್ ರೇಟ್ 8 ದಿನಕ್ಕೆ ಬಂದಿತ್ತು. ಇದೀಗ ಮೂರನೇ ಅಲೆಯಲ್ಲಿ 2-3 ದಿನಕ್ಕೆ ಬಂದಿದೆ. ಅತಿ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗ ಇದಾಗಿದ್ದು, ಲಸಿಕೆ ಪಡೆಯದವರ ಮೇಲೆ ಒಮಿಕ್ರಾನ್ ಪ್ರಭಾವ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ಮಕ್ಕಳ ಬಗ್ಗೆ ವಿಶೇಷ ನಿಗಾ ಮುಖ್ಯವಾಗಿದೆ. 15 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನ್ ಇಲ್ಲದ ಹಿನ್ನೆಲೆಯಲ್ಲಿ ವಿಶೇಷವಾದ ಕಾಳಜಿ ಮುಖ್ಯ. ಚಿಕ್ಕ ಮಕ್ಕಳಲ್ಲಿ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಲಸಿಕೆ ಕೊರತೆಯಿಲ್ಲ. 65 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ಸಂಗ್ರಹ ಇದೆ. ಮಾಧ್ಯಮದವರು ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್ ಎಂಬ ಕಾರಣಕ್ಕೆ ಮಾಧ್ಯಮದವರಿಗೂ ಬೂಸ್ಟರ್ ಡೋಸ್ ನೀಡಲು ನಿರ್ಧರಿಸಿದ್ದೇವೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...