Big News: ಮಲೈಕಾ ಜೊತೆಗಿನ ‘ಬ್ರೇಕಪ್’ ಕುರಿತು ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್ 12-01-2022 7:13PM IST / No Comments / Posted In: Featured News, Live News, Entertainment ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ನಡುವಿನ ಬ್ರೇಕಪ್ ವದಂತಿ ವಿಚಾರವಾಗಿ ನಟ ಅರ್ಜುನ್ ಕಪೂರ್ ಮೌನ ಮುರಿದಿದ್ದಾರೆ. ಮಲೈಕಾ ಅರೋರಾ ಜೊತೆಗಿನ ಹಿಂದೆಂದೂ ನೋಡಿರದ ಫೋಟೋವನ್ನು ಶೇರ್ ಮಾಡಿದ ನಟ ಅರ್ಜುನ್ ಕಪೂರ್ ಎಲ್ಲಾ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಬ್ರೇಕಪ್ ವದಂತಿಯ ಬಗ್ಗೆ ಕಿಡಿ ಕಾರಿದ ಅರ್ಜುನ್ ಕಪೂರ್ ಈ ಮಿರರ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಕಪ್ಪು – ಬಿಳಿ ಚಿತ್ರಕ್ಕೆ ಶೀರ್ಷಿಕೆ ನೀಡಿರುವ ಅರ್ಜುನ್ ಕಪೂರ್, ವದಂತಿಗಳಿಗೆ ಯಾವುದೇ ಜಾಗವಿಲ್ಲ. ಎಲ್ಲರೂ ಸುರಕ್ಷಿತವಾಗಿರಿ. ಎಲ್ಲರೂ ದೇವರ ಅನುಗ್ರಹದಲ್ಲಿರಿ. ನಿಮ್ಮೆಲ್ಲರಿಗೂ ಒಳ್ಳೆಯದನ್ನು ಬಯಸುತ್ತೇನೆ. ಲವ್ ಯೂ ಆಲ್ ಎಂದು ಬರೆದುಕೊಂಡಿದ್ದಾರೆ. ನಟ ಅರ್ಜುನ್ ಕಪೂರ್ ಹಾಗೂ ನಟಿ ಮಲೈಕಾ ಅರೋರಾ ಸರಿ ಸುಮಾರು 4 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಬಾಲಿವುಡ್ನ ಅನೇಕ ಪಾರ್ಟಿಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದೆ. 2018ರಲ್ಲಿ ಈ ಜೋಡಿ ಮಾಧ್ಯಮಗಳ ಎದುರು ತಮ್ಮ ಸಂಬಂಧವನ್ನು ಒಪ್ಪಿಕೊಂಡಿತ್ತು. ಈ ವರ್ಷದ ಆರಂಭದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿರುವ ಅರ್ಜುನ್ ಕಪೂರ್ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಮಲೈಕಾ ಹಾಗೂ ಅರ್ಜುನ್ ಕಪೂರ್ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಳ್ಳದೇ ಇದ್ದರಿಂದ ಬ್ರೇಕಪ್ ವದಂತಿ ಎಲ್ಲೆಡೆ ವೈರಲ್ ಆಗಿತ್ತು. https://www.instagram.com/p/CYoT_TKI0MT/?utm_source=ig_embed&ig_rid=18a28574-ccf0-4fce-99f6-d376602ba452