ಬುಲ್ಲಿ ಬಾಯ್ ಆಪ್ ಪ್ರಕರಣದ ಪ್ರಮುಖ ಆಪಾದಿತ, 21-ವರ್ಷ ವಯಸ್ಸಿನ ಇಂಜಿನಿಯರಿಂಗ್ ವಿದ್ಯಾರ್ಥಿ ನೀರಜ್ ಬಿಷ್ಣೋಯ್ನ ಇನ್ನಷ್ಟು ಮಜಲುಗಳು ತನಿಖೆ ವೇಳೆ ಹೊರಬರತೊಡಗಿವೆ.
’ಸುಲ್ಲಿಡೀಲ್ಸ್’ ಹೆಸರಿನ ಟ್ವಿಟರ್ ಹ್ಯಾಂಡಲ್ ಸೃಷ್ಟಿಕರ್ತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ನೀರಜ್, ಆತನೊಂದಿಗೆ ಸೇರಿ ಗಿಟ್ಹಬ್ನಲ್ಲಿ ಸುಲ್ಲಿ ಡೀಲ್ಸ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿ, ಆ ಮೂಲಕ ಮುಸ್ಲಿಮ್ ಮಹಿಳೆಯರ ಭಾವಚಿತ್ರಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಮಾರ್ಪಾಡಿಸಿ ಮಾರಾಟಕ್ಕಿದೆಯೆಂದು ಪೋಸ್ಟ್ ಹಾಕುತ್ತಿದ್ದ ಎಂದು ದೆಹಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಬುಲ್ಲಿ ಬಾಯಿ ಪ್ರಕರಣ: ಬಂಧಿತ ನೀರಜ್ ಬಗ್ಗೆ ತಂದೆಯಿಂದಲೇ ಸ್ಫೋಟಕ ಮಾಹಿತಿ ಬಹಿರಂಗ
ಮಹಿಳೆಯರನ್ನು ’ಹರಾಜಿಗೆ’ ಇಟ್ಟಂತೆ ಅವರ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಬುಲ್ಲಿ ಬಾಯ್ ಆಪ್ ಸೃಷ್ಟಿಸಿದ ಆಪಾದನೆ ಮೇಲೆ ನೀರಜ್ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ನೀರಜ್ ತನ್ನ 15ನೇ ವಯಸ್ಸಿನಿಂದಲೇ ಹ್ಯಾಕಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದು, ಜಾಲತಾಣಗಳನ್ನು ಹಾಳುಗೆಡವುತ್ತಾ ಬಂದಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಐಎಫ್ಎಸ್ಓ ವಿಶೇಷ ಘಟಕದ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ತಿಳಿಸಿದ್ದಾರೆ. ಈತ ಭಾರತ ಹಾಗೂ ಪಾಕಿಸ್ತಾನಗಳಲ್ಲಿರುವ ಅನೇಕ ಶಾಲೆಗಳ ಜಾಲತಾಣಗಳನ್ನು ಹ್ಯಾಕ್ ಮಾಡಿದ್ದ ಎನ್ನಲಾಗಿದೆ.