ಕೊರೊನಾ ಕೇಸ್‌ಗಳು ಹೆದರಿಕೆ ಹುಟ್ಟಿಸುವ ಮಟ್ಟಕ್ಕೆ ಗಣನೀಯವಾಗಿ ಹೆಚ್ಚುತ್ತಿವೆ. ಸುಮಾರು 1 ಲಕ್ಷ ಕೊರೊನಾ ಸೋಂಕಿತರು ಗುರುವಾರದಂದು ಒಂದೇ ದಿನದಲ್ಲಿ ದೇಶಾದ್ಯಂತ ವರದಿಯಾಗಿದ್ದಾರೆ.
ಹೊಸ ರೂಪಾಂತರಿ ಓಮಿಕ್ರಾನ್ ತೀವ್ರವಾಗಿ ಪ್ರಸರಣ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಅಟ್ಟಹಾಸ ಮಿತಿಮೀರುತ್ತಲೇ ಮೂರನೇ ಅಲೆಯ ಮಧ್ಯಕ್ಕೆ ಬಂದು ನಿಂತುಬಿಟ್ಟಿದ್ದೇವೆ. ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು ಕೊರೊನಾ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ. ಗುರುವಾರ ರಾತ್ರಿವರೆಗೆ ದಾಖಲಾದ ರಾಜ್ಯದ 5 ಸಾವಿರ ಹೊಸ ಸೋಂಕಿತರ ಪೈಕಿ 4 ಸಾವಿರ ಕೇಸ್‌ಗಳು ಬೆಂಗಳೂರಿನಲ್ಲಿವೆ.
ಇವೆಲ್ಲದರ ನಡುವೆ ಕೊರೊನಾ ಸೋಂಕು ತಡವಾಗಿ ದೃಢಪಟ್ಟ 15 ವರ್ಷದ ಹೆಣ್ಣುಮಗಳೊಬ್ಬಳು ಬೆಂಗಳೂರಿನಲ್ಲಿ ಬುಧವಾರ ಮೃತಪಟ್ಟಿದ್ದಾಳೆ. 2021 ರ ಸೆಪ್ಟೆಂಬರ್ ಬಳಿಕ ಬಾಲಕಿಯೊಬ್ಬಳು ಕೊರೊನಾಗೆ ಬಲಿ ಆಗಿರುವುದು ಇದೇ ಮೊದಲು.
BIG NEWS: ವ್ಯಾಪಕವಾಗಿ ಹರಡುತ್ತಿದೆ ರೂಪಾಂತರಿ ವೈರಸ್; ಒಮಿಕ್ರಾನ್ ಸೋಂಕಿತರ ಸಂಖ್ಯೆ 3,007ಕ್ಕೆ ಏರಿಕೆ
ಆಗ 3 ವರ್ಷದ ಬಾಲಕಿಯೊಬ್ಬಳು ಇನ್‌ಫ್ಲುಯೆಂಜಾ ಮಾದರಿಯ ಸೋಂಕಿನ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ತೀವ್ರ ಜ್ವರ, ಚಳಿ ಬಾಧಿಸುತ್ತಿತ್ತು. ಆದರೆ, ಗಂಭೀರ ಅನಾರೋಗ್ಯ ಇರಲಿಲ್ಲ. ಈಗಲೂ ಅದೇ ರೀತಿ ಇನ್‌ಫ್ಲುಯೆಂಜಾ ಲಕ್ಷಣಗಳಿದ್ದ 15 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ನರರೋಗ ಸಂಬಂಧಿತ ಸಮಸ್ಯೆಯಿಂದಾಗಿ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದ ಬಾಲಕಿಯು ಏಕಾಏಕಿ ಪ್ರಜ್ಞೆ ತಪ್ಪಿದ್ದಾಳೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸಲಾಗಿದೆ. ಆ ವೇಳೆ ಐಸಿಯುನಲ್ಲಿ ಬಾಲಕಿಗೆ ಕೊರೊನಾ ತಪಾಸಣೆ ನಡೆಸಿದಾಗ ಪಾಸಿಟಿವ್ ಎಂದು ಬಂದಿದೆ. ಬಳಿಕ ಬಾಲಕಿಯು ಅಸುನೀಗಿದ್ದಾಳೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ತಿಳಿಸಿದ್ದಾರೆ.
ನೇರವಾಗಿ ಕೊರೊನಾದಿಂದ ಮೃತಪಟ್ಟಿಲ್ಲ ಎಂದು ಪ್ರಕರಣವನ್ನು ಬಿಬಿಎಂಪಿ ಅಧಿಕಾರಿಗಳು ವರ್ಗೀಕರಿಸಿದ್ದಾರೆ. ಕಳೆದ ಮಾರ್ಚ್‌ನಿಂದ ಇದುವರೆಗೂ ಕರ್ನಾಟಕದಲ್ಲಿ 17 ವರ್ಷದೊಳಗಿನ 93 ಮಕ್ಕಳು ಕೊರೊನಾಗೆ ಬಲಿಯಾಗಿದ್ದಾರೆ. ಈ ಪೈಕಿ 72 ಮಕ್ಕಳಿಗೆ ರೋಗನಿರೋಧಕ ಶಕ್ತಿ ಕಡಿಮೆ ಇದ್ದದ್ದೇ ಮುಖ್ಯ ಕಾರಣವೇ ಹೊರತು, ಇತರ ಗಂಭೀರ ಅನಾರೋಗ್ಯದ ಇತಿಹಾಸವಿರಲಿಲ್ಲ ಎನ್ನಲಾಗಿದೆ.