ವಿಶ್ವದಾದ್ಯಂತ ಕೊರೊನಾ ಮತ್ತೆ ಅಬ್ಬರಿಸಲು ಶುರು ಮಾಡಿದೆ. ಕೊರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ಆತಂಕ ಜನರಲ್ಲಿದೆ. ಒಂದನೇ, ಎರಡನೇ ಅಲೆ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡ ಸರ್ಕಾರ, ಮೂರನೇ ಅಲೆಯಲ್ಲಿ ಅನಾಹುತ ತಡೆಯಲು ಅನೇಕ ಕ್ರಮಗಳನ್ನು ಕೈಗೊಂಡಿದೆ.
ಹಾಗಾಗಿಯೇ ಸರ್ಕಾರ ಎಲ್ಲ ಸೇವೆಗಳನ್ನು ಆನ್ಲೈನ್ ಮಾಡ್ತಿದೆ. ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರಿಗೂ ನೆಮ್ಮದಿ ಸುದ್ದಿಯಿದೆ. ಜನರು ಅಂಚೆ ಕಚೇರಿಗೆ ಹೋಗಿ ಅಪಾಯ ಮೈಮೇಲೆಳೆದುಕೊಳ್ಳಬೇಕಾಗಿಲ್ಲ. ಆನ್ಲೈನ್ ನಲ್ಲಿಯೇ ಅನೇಕ ಸೇವೆಗಳನ್ನು ಪಡೆಯಬಹುದು.
ಸಾರ್ವಜನಿಕ ಭವಿಷ್ಯ ನಿಧಿ, ಆರ್ಡಿ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಯಾವುದೇ ಯೋಜನೆ ಮಾಸಿಕ ಕಂತನ್ನು ನೀವು ಆನ್ಲೈನ್ ಮೂಲಕ ಪಾವತಿ ಮಾಡಬಹುದು. ಇದಕ್ಕೆ ನಿಮಗೆ ಪೋಸ್ಟ್ ಪೇಮೆಂಟ್ ಬ್ಯಾಂಕ್ನ ಐಪಿಪಿಬಿ ಮೊಬೈಲ್ ಅಪ್ಲಿಕೇಷನ್ ಅಗತ್ಯವಿದೆ. ಇನ್ನೂ ನಿಮ್ಮಲ್ಲಿ ಈ ಅಪ್ಲಿಕೇಷನ್ ಇಲ್ಲವೆಂದ್ರೆ ತಕ್ಷಣ ಡೌನ್ಲೋಡ್ ಮಾಡಿ.
ನಂತ್ರ ಲಾಗಿನ್ ಆದ್ಮೇಲೆ ನಿಮ್ಮ ಖಾತೆಯಿಂದ ಐಪಿಪಿಬಿ ಖಾತೆಗೆ ಹಣ ವರ್ಗಾಯಿಸಬೇಕು. ನಂತ್ರ ನೀವು ನಿಮ್ಮ ಯೋಜನೆಯ ಶುಲ್ಕವನ್ನು ಪಾವತಿ ಮಾಡಬಹುದು. ಸ್ಕೀಮ್ ಗೆ ಸಂಬಂಧಿಸಿದ ಖಾತೆ ಸಂಖ್ಯೆ ಹಾಗೂ ಐಡಿ ನಮೂದಿಸಬೇಕಾಗುತ್ತದೆ.