
ಎಲೆಕ್ಟ್ರಿಕ್ ಸ್ಕೂಟರ್ ಓಲಾ ಕಂಪನಿಯು ಖರೀದಿ ವಿಂಡೋ ತೆರೆಯಲು ಯೋಜಿಸುತ್ತಿದ್ದರೆ, ಮಾರಾಟದ ಮೊದಲ ಹಂತದಲ್ಲಿ ಅನೇಕ ಗ್ರಾಹಕರು ತಡವಾದ ವಿತರಣೆಯ ಬಗ್ಗೆ ದೂರಿದ್ದಾರೆ. ಡಿಸೆಂಬರ್ 31ರಂದು, ಮೊದಲ ಹಂತದಲ್ಲಿ ನೋಂದಣಿ ಮಾಡಿದ್ದ ಎಲ್ಲಾ ಸ್ಕೂಟರ್ಗಳನ್ನು ರವಾನಿಸಲಾಗಿದೆ ಎಂದು ಓಲಾ ಸಿಇಒ ಹೇಳಿದ್ದಾರೆ. ಆದರೆ, ಅನೇಕ ಖರೀದಿದಾರರು ವಿತರಣೆ ತಡವಾದ ಬಗ್ಗೆ ದೂರು ನೀಡಿದ್ದಾರೆ.
ಓಲಾ ಡಿಸೆಂಬರ್ 15 ರಿಂದ ಎಲೆಕ್ಟ್ರಿಕ್ ಸ್ಕೂಟರ್ ನ ವಿತರಣೆಯನ್ನು ಪ್ರಾರಂಭಿಸಿತು. ಕಂಪನಿಯು ಓಲಾ ಎಸ್-1 ಮತ್ತು ಓಲಾ ಎಸ್-1 ಪ್ರೋ ಎಂಬ ಎರಡು ಸ್ಕೂಟರ್ಗಳನ್ನು ಮಾರಾಟ ಮಾಡುತ್ತಿದೆ. ಮೊದಲ ಹಂತದ ಮಾರಾಟದಲ್ಲಿ ಓಲಾ ಎಸ್-1 ಅನ್ನು ಬುಕ್ ಮಾಡಿದ ಅನೇಕ ಖರೀದಿದಾರರು ಓಲಾ ಎಸ್-1 ಪ್ರೋ ಅನ್ನು ಪಡೆದಿದ್ದಾಗಿ ವರದಿಯಾಗಿದೆ. ಓಲಾ ಎಸ್-1 ಸ್ಕೂಟರ್ ಖರೀದಿದಾರರು 30,000 ರೂ. ಹೆಚ್ಚುವರಿ ಮೊತ್ತವನ್ನು ಪಾವತಿಸುವ ಮೂಲಕ ಸ್ಕೂಟರ್ ಅನ್ನು ಸಂಪೂರ್ಣವಾಗಿ ಓಲಾ ಎಸ್-1 ಪ್ರೋ ಗೆ ಅಪ್ಗ್ರೇಡ್ ಮಾಡಬಹುದಾಗಿದೆ.