ಕೋವಿಡ್-19 ಸೋಂಕಿನಿಂದ ಸುದೀರ್ಘಾವಧಿಗೆ ಬಳಲಿ ತರಬೇತಿಗೆ ಮರಳುತ್ತಿರುವ ಅಥ್ಲೀಟ್ಗಳು ವೈದ್ಯಕೀಯ ಪರೀಕ್ಷೆಗಳ ಸರಣಿಯನ್ನೇ ಎದುರಿಸಬೇಕು ಎಂದು ಅಧ್ಯಯನವೊಂದು ತಿಳಿಸಿದೆ.
ಆಂಗಿಲಾ ರಸ್ಕಿನ್ ವಿವಿಯ ಸಂಶೋಧಕರು ನಡೆಸಿದ ಅಧ್ಯಯನವೊಂದರ ವರದಿಯಲ್ಲಿ, ನಾಲ್ಕು ವಾರಗಳಿಗಿಂತ ಹೆಚ್ಚಿನ ಅವಧಿಗೆ ಕೋವಿಡ್-19 ಸೋಂಕಿನಿಂದ ಬಳಲಿದ ಅಥ್ಲೀಟ್ಗಳಲ್ಲಿ ಮೆದುಳು, ಹೃದಯ, ಶ್ವಾಸಕೋಶ ಅಥವಾ ಕಿಡ್ನಿಗಳಂಥ ಅಂಗಗಳ ಡ್ಯಾಮೇಜ್ಗೆ ಒಳಗಾಗಿರುವ ಸಾಧ್ಯತೆ ಇರುವ ಕಾರಣ ಅವರಿಗೆ ಮಯೋಕಾರ್ಡಿಟಿಸ್ ಮತ್ತು ನ್ಯೂಮೋನಿಯಾ ಬಂದಿರುವ ಸಾಧ್ಯತೆ ಇರುವುದರಿಂದ ತಮ್ಮ ತರಬೇತಿ ಕಾರ್ಯಕ್ರಮಗಳನ್ನು ಮರಳಿ ಆರಂಭಿಸುವ ಮುನ್ನ ತಜ್ಞರಿಂದ ಬಹು ಆಯಾಮಗಳಲ್ಲಿ ಪರೀಕ್ಷೆಗೆ ಒಳಗಾಗುವುದು ಸೂಕ್ತ ಎಂದು ತಿಳಿಸಲಾಗಿದೆ.
ಮದುವೆ ದಿನವೇ ನೀ ಮೊದಲಾ…..ನಾ ಮೊದಲಾ…..ಅಂದ್ರು ವಧು-ವರ..!
ಹೀಗಾದ ಪಕ್ಷದಲ್ಲಿ ಅಥ್ಲೀಟ್ಗಳು ತಮ್ಮ ದೈಹಿಕ ಆರೋಗ್ಯದ ಸ್ಥಿತಿಯ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ನಿರಂತರವಾಗಿ ವಿಶ್ಲೇಷಣೆಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಲಾಗಿದ್ದು, ರಕ್ತ ಪರೀಕ್ಷೆಗಳು, ಎದೆಯ ಎಕ್ಸ್-ರೇ, ಇಸಿಜಿ ಮತ್ತು ಎಂಆರ್ಐ ಸ್ಕ್ಯಾನ್ಗಳನ್ನು ಇದು ಒಳಗೊಂಡಿದೆ ಎಂದು ’ಅನಲ್ಸ್ ಆಫ್ ಮೆಡಿಸಿನ್’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.
ಕೋವಿಡ್-19 ಇನ್ನೂ ಅಪರಿಚಿತವಾದ ಪರಿಸ್ಥಿತಿಯಾಗಿಉವ ಕಾರಣ, ಸೋಂಕಿತರು ಚೇತರಿಸಿಕೊಂಡ ಬಳಿಕವೂ ಅವರಲ್ಲಿ ಆರೋಗ್ಯ ಸಂಬಂಧಿ ರಿಸ್ಕ್ಗಳು ಇರುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.