ಬಾಲಿವುಡ್ನ ಹೆಸರಾಂತ ನಟ, ನಿರ್ಮಾಪಕ ಜಾನ್ ಅಬ್ರಹಾಂ ಹಾಗೂ ಅವರ ಪತ್ನಿ ಪ್ರಿಯಾ ಕೊರೊನಾ ಸೋಂಕಿಗೆ ಒಳಗಾಗಿದ್ದು ಪ್ರಸ್ತುತ ಹೋಂ ಕ್ವಾರಂಟೈನ್ನಲ್ಲಿ ಇದ್ದಾರೆ.
ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಇಂದು ಶೇರ್ ಮಾಡಿರುವ ನಟ ಜಾನ್ ಅಬ್ರಹಾಂ ಮೂರು ದಿನಗಳ ಹಿಂದೆ ತಾವು ಭೇಟಿಯಾಗಿದ್ದ ವ್ಯಕ್ತಿಯೊಬ್ಬರಿಗೆ ಕೋವಿಡ್ ಇತ್ತು ಎಂದು ಮಾಹಿತಿ ನೀಡಿದ್ದಾರೆ.
ನಾನು ಮೂರು ದಿನಗಳ ಹಿಂದೆ ಕೋವಿಡ್ ಸೋಂಕನ್ನು ಹೊಂದಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದೆ. ನನಗೆ ಮೊದಲು ಅವರಿಗೆ ಕೊರೊನಾ ಸೋಂಕಿದೆ ಎಂಬುದು ತಿಳಿದಿರಲಿಲ್ಲ. ನಾನು ಹಾಗೂ ಪ್ರಿಯಾ ಇಬ್ಬರಿಗೂ ಕೋವಿಡ್ ಸೋಂಕು ತಗುಲಿದೆ. ನಾವು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇವೆ. ನಾವು ಯಾರೊಂದಿಗೂ ಸಂಪರ್ಕವನ್ನು ಹೊಂದಿಲ್ಲ. ನಮಗೆ ಸೌಮ್ಯ ಪ್ರಮಾಣದಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಜಾನ್ ಅಬ್ರಹಾಂ ಬರೆದುಕೊಂಡಿದ್ದಾರೆ.
ನಾವಿಬ್ಬರೂ ಸಂಪೂರ್ಣವಾಗಿ ಕೊರೊನಾ ಲಸಿಕೆಯನ್ನು ಸ್ವೀಕರಿಸಿದ್ದೇವೆ. ನಮಗೆ ಸೌಮ್ಯ ಲಕ್ಷಣಗಳು ಮಾತ್ರ ಕಾಣಿಸಿಕೊಂಡಿವೆ. ಎಲ್ಲರೂ ಆರೋಗ್ಯವಾಗಿರಿ. ಮಾಸ್ಕ್ ಧರಿಸಿ ಎಂದು ಬರೆದಿದ್ದಾರೆ.
ಇತ್ತೀಚಿಗೆ ಮೃನಾಲ್ ಠಾಕೂರ್, ನೋರಾ ಫತೇಹಿ ಹಾಗೂ ಶಿಲ್ಪಾ ಶಿರೋಡ್ಕರ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ಕಳೆದ ವಾರ ಅರ್ಜುನ್ ಕಪೂರ್ ಹಾಗೂ ಅವರ ಸೋದರ ಸಂಬಂಧಿ ಮತ್ತು ನಿರ್ಮಾಪಕಿ ರಿಯಾ ಕಪೂರ್ ಹಾಗೂ ಅವರ ಪತಿ ಕರಣ್ ಬೂಲಾನಿ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅರ್ಜುನ್ ಸಹೋದರಿ ಅಂಶುಲಾ ಕಪೂರ್ ಕೂಡ ಕೋವಿಡ್ಗೆ ತುತ್ತಾಗಿದ್ದರು.