ನಾಯಿಗಳು ಮನುಷ್ಯನ ಆತ್ಮೀಯ ಸ್ನೇಹಿತ ಅನ್ನೋದು ಈ ವೈರಲ್ ವಿಡಿಯೊ ಮೂಲಕ ಮತ್ತೆ ಸಾಬೀತಾಗಿದೆ. ನಾಯಿಯೊಂದು ಮನುಷ್ಯನನ್ನು ಮುದ್ದಾಡುವ ಮತ್ತು ತಬ್ಬಿಕೊಳ್ಳುವ ಕ್ಲಿಪ್ ಆನ್‌ಲೈನ್‌ನಲ್ಲಿ ಸಾಕಷ್ಟು ಪ್ರೀತಿ ಗಳಿಸುತ್ತಿದೆ. ವೈರಲ್ ಕ್ಲಿಪ್ ಅನ್ನು ಡಿಸೆಂಬರ್ 30 ರಂದು ಬ್ಯುಟೆಂಗೆಬೀಡೆನ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ
ವೈರಲ್ ಆಗಿರುವ ವಿಡಿಯೋದಲ್ಲಿ ಮನೆಯಿಲ್ಲದ ವ್ಯಕ್ತಿಯೊಬ್ಬ ಬೀದಿಯಲ್ಲಿ ಕುಳಿತಿರುವುದನ್ನು ಕಾಣಬಹುದು. ಬೇರೆ ಕಡೆ ನೋಡುತ್ತಿದ್ದವನ ಹತ್ತಿರ ಬಂದ ನಾಯಿಯೊಂದು ಸ್ವಲ್ಪ ಹೊತ್ತು ಅವನನ್ನೇ ದಿಟ್ಟಿಸಿ ನೋಡಿದೆ. ಕೆಲವು ಸೆಕೆಂಡುಗಳ ನಂತರ, ನಾಯಿಯು ಅಪರಿಚಿತನನ್ನು ತಬ್ಬಿಕೊಂಡು, ಅವನನ್ನ ಸಮಾಧಾನಪಡಿಸಲು ಪ್ರಯತ್ನಿಸುತ್ತದೆ. ಆ ಮನುಷ್ಯನು ನಾಯಿಯನ್ನು ತಬ್ಬಿಕೊಂಡಿದ್ದಾನೆ. ಇಬ್ಬರು ವಿಡಿಯೋದ ಕೊನೆಯವರೆಗೂ ಒಬ್ಬರನ್ನೊಬ್ಬರು ತಬ್ಬಿಕೊಂಡಿದ್ದರು. ಈ ನಾಯಿ ಮನೆಯಿಲ್ಲದ ಮನುಷ್ಯನನ್ನು ಸಂಪರ್ಕಿಸಿ, ಅವನಿಗೆ ಏನು ಬೇಕು ಎಂಬುದು ಈ ನಾಯಿಗೆ ತಿಳಿದಿದೆ ಎಂಬ ಶೀರ್ಷಿಕೆ ನೀಡಿ ಈ ವಿಡಿಯೋವನ್ನ ಪೋಸ್ಟ್ ಮಾಡಲಾಗಿದೆ.
ಈ ಮುದ್ದಾದ ಕ್ಲಿಪ್ ನೆಟ್ಟಿಗರ ಹೃದಯ ಗೆದ್ದಿದೆ. ಅವರು ತಮ್ಮ ಪ್ರತಿಕ್ರಿಯೆಗಳೊಂದಿಗೆ ಕಾಮೆಂಟ್‌ಗಳ ಸೆಕ್ಷನ್ ಅನ್ನ ತುಂಬಿದ್ದಾರೆ. “ವಾಸ್ತವವಾಗಿ, ಇದು ಎರಡು ಕಾರಣಗಳಿಗಾಗಿ ನೋಡಬೇಕಾದ ವಿಡಿಯೋ ಎಂದು ನಾನು ಭಾವಿಸುತ್ತೇನೆ. ಮೊದಲೆನೆಯದಾಗಿ ಮನುಷ್ಯ ನಿರಾಶ್ರಿತನಾಗುತ್ತಿದ್ದಾನೆ ಹಾಗೂ ಈ ನಿರಾಶ್ರಿತರಿಗು ಪ್ರೀತಿಯ ಅಗತ್ಯವಿದೆ. ಎರಡನೆಯದಾಗಿ, ಪ್ರಾಣಿಗಳು ಎಲ್ಲರನ್ನು ಯಾವುದೇ ಷರತ್ತಿಲ್ಲದೆ ಪ್ರೀತಿಸುತ್ತವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಬಳಕೆದಾರರು, “ನಾವು ನಾಯಿಗಳಿಗೆ ಅರ್ಹರಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಪ್ರಾಣಿಗಳಿಗೆ ದೊಡ್ಡ ಮನಸ್ಸಿದೆ ಎಂಬುದು ಮತ್ತೆ ಸಾಬೀತಾಗಿದೆ.
https://twitter.com/buitengebieden_/status/1476544786333065219?ref_src=twsrc%5Etfw%7Ctwcamp%5Etweetembed%7Ctwterm%5E1476544786333065219%7Ctwgr%5E%7Ctwcon%5Es1_&ref_url=https%3A%2F%2Fd-10469392172724670823.ampproject.net%2F2111242025001%2Fframe.html